ಕೊಕ್ಕಡ: ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಚಿಣ್ಣರ ಸಂಭ್ರಮ ಕಾರ್ಯಕ್ರಮವು ಜ. 06 ರಂದು ನಡೆಯಿತು.
ಬೆಳಗ್ಗೆ 9.30ಕ್ಕೆ ಧ್ವಜಾರೋಹಣದ ಮೂಲಕ ಕೊಕ್ಕಡದ ಪಂಚಮಿ ಹಿತಾಯುರ್ಧಾಮದ ವೈದ್ಯ ಡಾ.ಮೋಹನ್ ದಾಸ್ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಯುವ ಉದ್ಯಮಿ ಗಣೇಶ್ ಕಲಾಯಿ ಉಪಸ್ಥಿತರಿದ್ದರು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಸಂಜೆ ನಡೆದ ಸಭಾಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ವಹಿಸಿದರು.
ಅಭ್ಯಾಗತರಾಗಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ತುಮಕೂರು ಪತ್ರಿಕೋದ್ಯಮ ಸಮೂಹ ಸಂವಹನ ಮುಖ್ಯಸ್ಥ ಡಾ| ಸಿಬಂತಿ ಪದ್ಮನಾಭ ಕೆ.ವಿ., ಬರೆಂಗಾಯ ಅಗ್ರಿಲೀಫ್ ಎಕ್ಸ್ ಪೋರ್ಟ್ ಪ್ರೈ.ಲಿ ಮಾಲಕ ಅವಿನಾಶ್ ರಾವ್, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ, ಕೃಷಿಕ ಮಧುಕರ ರಾವ್ ಮಚ್ಚಳೆ ನಿಡ್ಲೆ, ಸೌತಡ್ಕ ಶ್ರೀಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು, ಹತ್ಯಡ್ಕ ಪ್ರಾ.ಕೃ.ಪ.ಸ.ಸಂಘ ಅಧ್ಯಕ್ಷ ರಾಘವೇಂದ್ರ ನಾಯಕ್ ಬರ್ಗುಳ, ಬೆಳ್ತಂಗಡಿ ನಿವೃತ್ತ ಕ್ಷೇತ್ರ ಸಮನ್ವಯಾಧಿಕಾರಿ ಗಣೇಶ್ ಐತಾಳ್, ಸೌತಡ್ಕ ನೈಮಿಷ ಹೌಸ್ ಆಫ್ ಸ್ಪೈಸಸ್ ಮಾಲಕ ಬಾಲಕೃಷ್ಣ, ಪಟ್ಟೂರು ವಿಷ್ಣುಮೂರ್ತಿ ಶಾಲೆಯ ಸ್ಥಾಪಕ ಸದಸ್ಯ ಕೃಷ್ಣಮೂರ್ತಿ ಭಟ್ ಕಳಂದೂರು, ಶಾಲಾ ಅಧ್ಯಕ್ಷ ಚಂದ್ರ ಶೇಖರ ಗೌಡ ಧರ್ಮದಕಳ, ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ದೇರಾಜೆ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮೆಸ್ಕಾಂ ಪವರ್ ಮ್ಯಾನ್ ಅಶೋಕ್ ರಾಥೋಡ್, ಪಟ್ಟೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಸುಗಂಧಿನಿ, ನೇಸರ ನ್ಯೂಸ್ ಚಾನಲ್ ನ ಪ್ರಶಾಂತ್ ಸಿ. ಎಚ್, ಸುದ್ದಿ ಉದಯ ಪತ್ರಿಕೆಯ ಪಿ.ತಿಮ್ಮಪ್ಪ ಗೌಡ, ಕೇಶವ ಹಳ್ಳಿಂಗೇರಿ, ಸತೀಶ್ ಎಲಿಕಳ ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಚಂದ್ರಶೇಖರ್ ಶೇಟ್, ಪಟ್ಟೂರು ಮಾತೃಭಾರತಿ ಶ್ರೀರಾಮ ವಿದ್ಯಾಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ದಿವ್ಯ, ಪೋಷಕ-ರಕ್ಷಕ ಸಂಘದ ಅಧ್ಯಕ್ಷ ರಮೇಶ್ ಗೌಡ, ಪದಾಧಿಕಾರಿಗಳು ಹಾಗೂ ವಿವಿಧ ಸಮಿತಿಯ ಸದಸ್ಯರು, ಶಿಕ್ಷಕ ವರ್ಗ, ಬೋಧಕೇತರ ಸಿಬ್ಬಂದಿ, ಪೋಷಕ ವೃಂದ, ವಿದ್ಯಾರ್ಥಿ ವೃಂದ, ಹಿರಿಯ ವಿದ್ಯಾರ್ಥಿ ವೃಂದ, ಸಹಕರಿಸಿದರು.
ಪ್ರಶಾಂತ್ ಶೆಟ್ಟಿ ದೇರಾಜೆ ಸ್ವಾಗತಿಸಿ, ವೃಶಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಕೆ. ಧನ್ಯವಾದವಿತ್ತರು.
ಸಂಜೆ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಹಾಗೂ ಯಕ್ಷಗಾನ ದಕ್ಷಯಜ್ಞ ನಡೆಯಿತು.