ರಾಜ್ಯದಲ್ಲಿ ಇಂದಿನಿಂದಲೇ (ಫೆ.1) ಮದ್ಯದ ದರ ಏರಿಕೆಯಾಗಿದ್ದು ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಂತಾಗಿದೆ.
ಅಬಕಾರಿ ಸುಂಕವನ್ನು 185% ರಿಂದ 195%ಗೆ ಹೆಚ್ಚಿಸಿರುವ ಹಿನ್ನೆಲೆ, ಬಿಯರ್ ಬಾಟಲಿಗೆ 5 ರಿಂದ 12 ರೂ. ವರೆಗೂ ಬೆಲೆ ಏರಿಕೆಯಾಗಿದೆ. ಇದರಿಂದ ಕಳೆದ 6 ತಿಂಗಳ ಅಂತರದಲ್ಲಿ ಬಿಯರ್ ಬೆಲೆ ಸುಮಾರು 40 ರೂ.ಗಳಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ನೇನೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಯರ್ ಮೇಲೆ ಶೇ.20 ರಷ್ಟು ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿತ್ತು. ಬಳಿಕ ಬಿಯರ್ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಪ್ರತಿ ಬಾಟಲ್ ಮೇಲೆ ಕನಿಷ್ಠ 10 ರೂ.ವರೆಗೆ ದರ ಏರಿಕೆ ಮಾಡಿದ್ದವು.
ಇದೀಗ ಮತ್ತೆ ಸರ್ಕಾರ ಅಬಕಾರಿ ಸುಂಕ ಹೆಚ್ಚಿಸಿದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಬಿಯರ್ ದರ ಹೆಚ್ಚಳವಾಗಿದೆ.