ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ ಆಚರಣೆಯನ್ನು ಫೆ.11 ರ ಆದಿತ್ಯವಾರ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪರವಾಗಿ ವಿಧಾನ ಸಭೆಯ ಅಧ್ಯಕ್ಷರು ಮಂಗಳೂರು ವಿಧಾನ ಸಭಾ ಸದಸ್ಯರು ಆಗಿರುವ ಸನ್ಮಾನ್ಯ ಯು ಟಿ ಖಾದರ್ ಅವರನ್ನು ಆಮಂತ್ರಣ ಪತ್ರಿಕೆಯನ್ನು ಕೊಟ್ಟು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಿಕಾರ್ ಜೆನೆರಲ್ ಅತಿ ವಂದನಿಯ ಜೋಸ್ ವಲಿ ಯಪರಂಭಿಲ್ ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಪಿ ಆರ್ ಓ ಸೇಬಾಷ್ಟಿಯನ್ ಪಿ.ಸಿ, ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ದ ಧರ್ಮ ಗುರುಗಳು ಹಾಗೂ ಕೆ ಎಸ್ ಎಂ ಸಿ ಎ ನಿರ್ದೇಶಕರಾದ ವಂದನಿಯ ಫಾ.ಶಾಜಿ ಮಾತ್ಯು. ಫಾ. ಜೋಬಿ ಪುಲ್ಲಾಟ್ ಜ್ಞಾನ ನಿಲಯ ಬೆಳ್ತಂಗಡಿ, ನೆಲ್ಯಾಡಿ ವರ್ತಕ ಸಂಘದ ಕೋಶಾಧಿಕಾರಿ ಹಾಗೂ ಸಂತ ಅಲ್ಫೋನ್ಸ ಚರ್ಚ್ ನ ಮಾಜಿ ಟ್ರಸ್ಟಿ ಜೋಸೆಫ್ ವಿ.ಜೆ ಜೊತೆಯಲ್ಲಿದ್ದರು.