ನಕಲಿ ಚಿನ್ನಾಭರಣ ಇರಿಸಿ 1.70 ಲಕ್ಷ ರೂ ಪಡೆದು ವಂಚಿಸಿದ ಪ್ರಕರಣ ಉಪ್ಪಿನಂಗಡಿಯಲ್ಲಿ ನಡೆದಿದ್ದು. ಈ ಸಂಬಂಧ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಉಪ್ಪಿನಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವ್ಯವಸ್ಥಾಪಕ್ಕಿ ಕಮಲ ಎಂಬವರು ದೂರು ನೀಡಿದ್ದು, ಮೆಲ್ಲಡಿ ಗ್ರಾಮದ ಸೆಬಾಸ್ಟಿನ್ ಹಾಗೂ ಕೇರಳ ಮೂಲದ ಡಾನಿಶ್ ಎಂಬುವರು ಜ.31 ರಂದು ಸಂಘದ ಕಚೇರಿಗೆ ಬಂದು 40 ಗ್ರಾಂ ತೂಕದ 5 ನಕಲಿ ಬಳೆ ಅಡಮಾನವಿರಿಸಿ 1.70 ಲಕ್ಷ ರೂ. ಸಾಲ ಪಡೆದು ವಂಚನೆಗೈದಿದ್ದಾರೆ ಎಂದು ದೂರಿದ್ದಾರೆ. ಪ್ರಕರಣದಲ್ಲಿ ಸಂಘದ ಚಿನ್ನಾಭರಣ ಪರಿಶೀಲನೆಕಾರರಾದ ಶ್ರೀಧರ ಆಚಾರ್ಯ ಈ ನಕಲಿ ಚಿನ್ನಾಭರಣ ಪರಿಶೀಲಿಸಿದ್ದು, ನೈಜ ಚಿನ್ನವೆಂದು ತಿಳಿಸಿ ನಂಬಿಸಿ ದ್ರೋಹವೆಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.