ಕೊಕ್ಕಡ:ಮನುಷ್ಯರಾದ ನಾವು ಅಜ್ಞಾನದಿಂದ ಜ್ಞಾನದ ಕಡೆಗೆ ಬರುವ ಸಮಯ, ಭಕ್ತಿಯಿಂದ ಮನಸ್ಸಿನಲ್ಲಿ ಬೇಡಿಕೊಂಡಲ್ಲಿ ಸಕಲ ಇಷ್ಟಾರ್ಥವನ್ನು ಈಡೇರಿಸುವ ಶ್ರೀ ಕ್ಷೇತ್ರ ಪಟ್ಲಡ್ಕ ಆಗಿದೆ. ನಾವುಗಳು ಅಧರ್ಮವನ್ನು ಬಿಟ್ಟು ಧರ್ಮದ ಕಡೆಗೆ ಬರಬೇಕು, ನಮ್ಮ ಹೃದಯದಲ್ಲಿ ಇರುವ ಜಾತಿಯ ವಿಷ ಬೀಜವನ್ನು ತೆಗೆದು ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂಬ ಭಾವನೆ ಬಂದಾಗ ಮಾತ್ರ ನಾವು ದೈವಗಳಿಗೆ ಮಾಡುವ ಪ್ರಾರ್ಥನೆ, ಭಕ್ತಿಗಳು ನಿಜವಾಗಲೂ ಸಾಧ್ಯ ಎಂದು ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ದೈವದ ನೇಮೋತ್ಸವ ಹಾಗೂ ಸ್ವಾಮಿ ಕೊರಗಜ್ಜ ದೈವದ ಕೋಲದ ಸಭಾ ಕಾರ್ಯಕ್ರಮವನ್ನು ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಲೋಕೇಶ್ ಬಾಣಜಾಲು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ (ರಿ.) ಪಟ್ಲಡ್ಕ ಕೌಕ್ರಾಡಿ ಇದರ ಅಧ್ಯಕ್ಷರಾದ ತುಕ್ರಪ್ಪ ಶೆಟ್ಟಿ ನೂಜೆ, ಅತಿಥಿಗಳಾಗಿ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘ ನಿ. ಅಧ್ಯಕ್ಷರಾದ ಉಷಾ ಅಂಚನ್, ನೆಲ್ಯಾಡಿ ಗ್ರಾಮ ಪಂಚಾಯಿತಿನ ನಿಕಟಪೂರ್ವ ಅಧ್ಯಕ್ಷರು ಹಾಗೂ ನೆಲ್ಯಾಡಿ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್, ಸಮಾಜ ರತ್ನ ಪುರಸ್ಕೃತರು ಹಾಗೂ ಹತ್ಯಡ್ಕ ಗ್ರಾಮ ಪಂಚಾಯತಿನ ಮಾಜಿ ಸದಸ್ಯರಾದ ಧರ್ಮರಾಜ್ ಅಡ್ಕಾಡಿ, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ನಾರಾಯಣ ಗೌಡ ಪಿ.ಕೆ, ಹುಣಸೂರು ಪ್ರಗತಿಪರ ಕೃಷಿಕ ಶಶೀಂದ್ರಪ್ಪ, ಉಪಾಧ್ಯಕ್ಷರಾದ ಹರೀಶ್.ಪಿ ಪಟ್ಲಡ್ಕ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ದೀಕ್ಷಾ ಚಂದನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಧಿಕಾ ಸ್ವಾಗತಿಸಿದರು, ಶ್ರೀಮತಿ ದೀಕ್ಷಾ ಚಂದನ್ ವಾಸ್ತವಿಕವಾಗಿ ಮಾತನಾಡಿದರು. ಸುರೇಶ್ ಪಡಿಪಂಡ ಹಾಗೂ ಸುಧೀರ್ ಕುಮಾರ್ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಧರ್ಮಶ್ರೀ ಭಜನಾ ಮಂಡಳಿ ಕೌಕ್ರಾಡಿ ಮತ್ತು ವೈದ್ಯನಾಥೇಶ್ವರ ಭಜನಾ ಮಂಡಳಿ ಕೊಕ್ಕಡ ಇವರಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು. ನಂತರ ಶ್ರೀ ಗಡಿಯಾಡಿ ಆದಿಮೊಗೇರ್ಕಳ ದೈವದ ನೇಮೋತ್ಸವ ಹಾಗೂ ಸ್ವಾಮಿ ಕೊರಗಜ್ಜ ದೈವದ ಕೋಲ, ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು.
ಸಮಿತಿ ಉಪಾಧ್ಯಕ್ಷರಾದ ಗಿರೀಶ್.ಡಿ ನೆಲ್ಯಾಡಿ, ಕೋಶಾಧಿಕಾರಿ ಪ್ರಕಾಶ್ ರೈ, ಜೊತೆ ಕಾರ್ಯದರ್ಶಿ ಮಕರಂದ, ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸತೀಶ್, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಶ್ರೀಮತಿ ಮಮತಾ ಹರೀಶ್, ಸರ್ವ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.