ಇಚಿಲಂಪಾಡಿ ಶ್ರೀ ಕ್ಷೇ .ಧ.ಗ್ರಾ .ಯೋಜನೆಯ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್ ಶುಭಾರಂಭ

ಶೇರ್ ಮಾಡಿ

ನೇಸರ ಫೆ.08:ಇಚಿಲಂಪಾಡಿ ಅನಿಲ್ ಕಾಂಪ್ಲೆಕ್ಸ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ವತಿಯಿಂದ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್ ಫೆ.07 ರಂದು ಶುಭಾರಂಭಗೊಂಡಿತು .
ಸೇವಾ ಕೇಂದ್ರವನ್ನು ಕೆನರಾ ಬ್ಯಾಂಕಿನ ಇಚಿಲಂಪಾಡಿ ಶಾಖೆಯ ಮ್ಯಾನೇಜರ್ ಪಸಿವುಳ್ ಹಸನ್ ಉದ್ಘಾಟಿಸಿ ಮಾತನಾಡಿ ಇಚಿಲಂಪಾಡಿಯಲ್ಲಿ ಆನ್‌ಲೈನ್ ಸೇವೆಯ ಕೇಂದ್ರ ಸ್ಥಾಪನೆ ಆಗಿರುವುದು ಶ್ಲಾಘನೀಯ ,ಇಲ್ಲಿ ಇತರ ಸೇವೆಯ ಜೊತೆ ಬ್ಯಾಂಕಿಂಗ್ ಸೇವೆಗಳು ದೊರೆಯಲಿದ್ದು ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಹೇಳಿ ಶುಭ ಹಾರೈಸಿದರು .

ಎಸ್ .ಕೆ.ಡಿ.ರ್.ಡಿ.ಪಿ ಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ರವರು ಮಾತನಾಡಿ ,ದೇಶದ ಕಟ್ಟ ಕಡೆಯ ವ್ಯಕ್ತಿಗೂ ಕೇಂದ್ರ ಸರಕಾರದ ಯೋಜನೆಗಳು ತಲುಪುತ್ತಿಲ್ಲ ,ಈ ಹಿನ್ನಲೆಯಲ್ಲಿ ಶ್ರೀ ಕ್ಷೇ. ಧ.ಗ್ರಾ .ಯೋಜನೆಯ ಮೂಲಕ ತಲುಪಿಸಲು ಸರಕಾರವು ಸಿ.ಎಸ್ .ಸಿ ಐಡಿಯನ್ನು ನೀಡಿದೆ
ಈ ಮೂಲಕ ಸೇವಾ ಕೇಂದ್ರವನ್ನು ಗ್ರಾಮ ಗ್ರಾಮಗಳಲ್ಲಿ ತೆರೆದು ಜನರಿಗೆ ನಾಗರಿಕ ಸೇವೆಯ ಎಲ್ಲಾ ಸೌಲಭ್ಯವನ್ನು ನೀಡಲಾಗುತ್ತದೆ . ಪ್ರದಾನ ಮಂತ್ರಿಯವರು ಡಾ.ಡಿ .ವೀರೇಂದ್ರ ಹೆಗ್ಗಡೆಯವರ ಮೂಲಕ ಯೋಜನೆಗಳನ್ನು ತಲುಪಿಸಲು ಅವಕಾಶ ನೀಡಿದ್ದಾರೆ ಎಂದು ಹೇಳಿದರು.

ಈ ಶ್ರಮ ಕಾರ್ಡ್ ವಿತರಿಸಿ ಮಾತನಾಡಿದ ಪಿ.ಎಲ್ .ಡಿ ಬ್ಯಾಂಕಿನ ಅಧ್ಯಕ್ಷ ಎಸ್ .ಭಾಸ್ಕರ ಗೌಡ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಇಂದು ಗ್ರಾಮ ಗ್ರಾಮದಲ್ಲಿ ಕಾಮನ್ ಸರ್ವಿಸ್ ಸೆಂಟರ್ ಪ್ರಾರಂಭವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ , ಹಾಗೂ ಇನ್ನು ಮುಂದೆ ಈ ಸರ್ವಿಸ್ ಗಳು ಇಚಿಲಂಪಾಡಿಯಲ್ಲಿ ದೊರೆಯುತ್ತಿರುವುದು ಈ ಭಾಗದ ಜನರ ಭಾಗ್ಯವೇ ಸರಿ ಎಂದರು

ಇಚಿಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ ಕೆರ್ನಡ್ಕ ಅವರು ಮಾತನಾಡಿ ,ಗ್ರಾಮ ಮಟ್ಟದಲ್ಲಿ ಇಂತಹ ಸೇವಾ ಕೇಂದ್ರಗಳು ಪ್ರಾರಂಭವಾಗುತ್ತಿರುವುದು ಗ್ರಾಮದ ಅಭಿವೃದ್ಧಿಗೆ ಪೂರಕವಾಗುತ್ತದೆ ,ಜನರು ನಿತ್ಯ ಅಲೆದಾಟ ಮಾಡುವುದು ತಪ್ಪುತ್ತದೆ ಎಂದರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ .ಕ್ಷೇ.ಧ .ಗ್ರಾ .ಯೋಜನೆಯ ಇಚಿಲಂಪಾಡಿ ಒಕ್ಕೂಟದ ಅಧ್ಯಕ್ಷ ಅನಿಲ್ ಕುಮಾರ್ ,ಡಾ| ಆಶಾರವರು ಮಾತನಾಡಿ ಶುಭ ಹಾರೈಸಿದರು .

ವೇದಿಕೆಯಲ್ಲಿ ಅನಿಲ್ ಕಾಂಪ್ಲೆಕ್ಸ್ ಮಾಲಕ ಅನಿಲ್ ಕುಮಾರ್ ಉಮೆಸಾಗು ಉಪಸ್ಥಿತರಿದ್ದರು .ತರಬೇತಿ ಸಹಾಯಿಕಿ ಅಮಿತ ಸ್ವಾಗತಿಸಿ, ಸೇವಾ ಪ್ರತಿನಿಧಿ ವೇದಾ ವಂದಿಸಿದರು .ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಡ್ಕ ಕಾರ್ಯಕ್ರಮ ನಿರೂಪಿಸಿದರು .ನಂದ ಕುಮಾರಿ ಪ್ರಾರ್ಥನೆ ಹಾಡಿದರು .ಯೋಜನೆಯ ಕಾರ್ಯಕರ್ತೆಯರು ಸಹಕರಿಸಿದರು.


———ಜಾಹೀರಾತು———

Leave a Reply

error: Content is protected !!