ನೆಲ್ಯಾಡಿಯ ಶಬರೀಶ ಕಲಾ ಕೇಂದ್ರದಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ಶಿಬಿರ ಮಾ.03ದಂದು ಉದ್ಘಾಟನೆಗೊಂಡಿತು.
ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಜ್ಯೋತಿವೈದ್ಯ ಹೋಮಿಯೋಪತಿ ಚಿಕಿತ್ಸಾಲಯದ ಡಾ.ಅನೀಶ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ SPYSS ಮಂಗಳೂರು ಉಪ್ಪಿನಂಗಡಿ ಸ್ಥಳಗಳಲ್ಲಿ ಉಚಿತ ಯೋಗ ಶಿಕ್ಷಣವನ್ನು ನೀಡುತ್ತಿದ್ದು ಇದನ್ನು ನೆಲ್ಯಾಡಿಯಂತಹ ಹಳ್ಳಿಯ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಗೂ ಪಸರಿಸುವ ಕೆಲಸವನ್ನು ನಾವು ಮಾಡಬೇಕು. ಸರ್ವರಿಗೂ ಆರೋಗ್ಯಪೂರ್ಣ ಜೀವನಕ್ಕೆ ದಾರಿ ಮಾಡಿ ಕೊಡುವ ಪ್ರಯತ್ನ ಮಾಡೋಣ ಎಂದರು.
ಶೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಉಪಾಧ್ಯಕ್ಷರಾದ ರವಿಚಂದ್ರ ಹೊಸವಕ್ಲು ಮಾತನಾಡುತ್ತ ಇಂತಹ ಯೋಗ ಶಿಬಿರಗಳು ಮನೆ ಮನೆಯನ್ನು ತಲುಪುವಂತಾಗಲಿ ಎಂದು ಹಾರೈಸಿದರು. ಶ್ರೀ ಪತಂಜಲಿ ಯೋಗ ಶಿಕ್ಷಣಯ ಸಮಿತಿ ಕದ್ರಿ ಶಾಖೆಯ ಸಂಚಾಲಕರಾದ ಶ್ರೀಯುತ ಆನಂದ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಆರಂಭ ಮತ್ತು ಬೆಳೆದು ಬಂದ ರೀತಿಯ ಬಗ್ಗೆ ಮಾಹಿತಿ ನೀಡಿದರು.
ಉಪ್ಪಿನಂಗಡಿ ಗಾಣಿಗ ಸಮುದಾಯ ಭವನದ ಯೋಗ ಬಂಧು ಶ್ರೀಮತಿ ಮಧುಮತಿ ಅಕ್ಕನವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪ್ಪಿನಂಗಡಿ, ಕೊಯಿಲ, ಆಲಂಕಾರು ಇತ್ಯಾದಿ ಶಾಖೆಗಳಿಂದ ಆಗಮಿಸಿದ ಯೋಗ ಬಂಧುಗಳು ತಮಗೆ ಯೋಗದಿಂದ ಆದ ಉಪಯೋಗ ಮತ್ತು ಅನುಭವಗಳನ್ನು ಹಂಚಿಕೊಂಡರು.
ಪುತ್ತೂರು ವಲಯ ಸಂಚಾಲಕರಾದ ಯೋಗೀಶ, ಪುತ್ತೂರು ತಾಲೂಕು ಶಿಕ್ಷಣ ಪ್ರಮುಖರಾದ ಪ್ರದೀಪ ಆಚಾರ್ಯ ಯೋಗ ತರಗತಿಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದರು. ಯೋಗ ಶಿಕ್ಷಕರಾದ ಸಂತೋಷ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಯಶೋಧರ, ಕೃಷ್ಣಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.
ಅಯ್ಯಪ್ಪ ಸ್ವಾಮಿ ದೇವಸ್ಥಾನ ಮತ್ತು ಶಬರೀಶ ಕಲಾ ಕೇಂದ್ರದ ಪದಾಧಿಕಾರಿಗಳು, ಡಾ. ರಾಮಕೃಷ್ಣ ಭಟ್, ವಿನೋದ್ ಕುಮಾರ್, ಶೇಖರ, ನವೀನ, ಹರೀಶ, ಮುರಳಿ ಮೋಹನ, ಆದಿತ್ಯ, ಮುಂತಾದವರು ಸಹಕರಿಸಿದರು.