ನೇಸರ ಫೆ.09:ಬೆಳ್ತಂಗಡಿ ತಾಲೂಕಿನ ಬೆಳಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿ ಇದರ ವಾರ್ಷಿಕ ಉತ್ಸವ ದಿನಾಂಕ 11-02-2022 ನೇ ಶುಕ್ರವಾರದಿಂದ ದಿನಾಂಕ 14 .02 .2022 ನೇ ಸೋಮವಾರ ತನಕ ನಡೆಯಲಿರುವುದು ಆ ಪ್ರಯುಕ್ತ ದಿನಾಂಕ 11 .02 .2022 ಶುಕ್ರವಾರದಂದು ಬೆಳಿಗ್ಗೆ ಗಂಟೆ 9 .00 ಕ್ಕೆ ವೇದಮೂರ್ತಿ ಶ್ರೀ ಶ್ರೀನಿವಾಸ ಹೊಳ್ಳ ಮತ್ತು ಬಳಗದ ಪೌರೋಹಿತ್ಯದಲ್ಲಿ ಚಂಡಿಕಾ ಯಾಗ ,ದುರ್ಗಾ ಪೂಜೆ,ಗಣ ಯಾಗ,ಶ್ರೀ ಸತ್ಯನಾರಾಯಣ ಪೂಜೆ,ಮಹಾ ಪೂಜೆ ನಡೆಯಲಿರುವುದು
ಸ್ವಸ್ತಿ| ಶ್ರೀ ಪ್ಲವ ನಾಮ ಸಂವತ್ಸರದ ಕುಂಭ ಮಾಸ 29 ಸಲುವ 12-02 -2022 ನೇ ಶನಿವಾರದಂದು ಬೆಳಿಗ್ಗೆ ಗಂಟೆ 9 .00 ರಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿಯಲ್ಲಿ ಶ್ರೀ ನಾಗದೇವರಿಗೆ ನಾಗತಂಬಿಲ ,ಶ್ರೀ ಚಾಮುಂಡೇಶ್ವರಿ ದೇವಿಗೆ ಕಲಶಾಭಿಷೇಕ, ಮತ್ತು ಮಹಾಪೂಜೆ ಹಾಗೂ ರಾತ್ರಿ ಗಂಟೆ 8 .00 ರಿಂದ ಆರಿಕೋಡಿ ಚಾಮುಂಡೇಶ್ವರಿ ದೇವಿಯ ವಾರ್ಷಿಕ ಉತ್ಸವ ಜರಗಲಿದೆ
ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ ಗಂಟೆ 6 .00 ರಿಂದ ಶ್ರೀ ಸದಾನಂದ ಮುಂಡಾಜೆ ಇವರ ಸಾರಥ್ಯದ
ಕೀರ್ತನಾ ಕಲಾತಂಡದ ಸದಸ್ಯರಿಂದ
“ಭಕ್ತಿಗಾನ ಯಕ್ಷ ನೃತ್ಯ”
ಹಾಗೂ ಸನ್ಮಾನ ಕಾರ್ಯಕ್ರಮ
ದಿನಾಂಕ 13 .02 -2022 ರವಿವಾರದಂದು ರಾತ್ರಿ ಗಂಟೆ 8 .00 ಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷ ಕಲಾ ತಂಡ ಸೂಡ, ಉಡುಪಿ ಇವರಿಂದ
“ಶ್ರೀ ದೇವಿ ಮಹಾತ್ಮೆ”
ಎಂಬ ತುಳು ಪುಣ್ಯ ಕಥಾ ಭಾಗ ಜರಗಲಿದೆ
ದಿನಾಂಕ 14 .02 .2022 ಸೋಮವಾರದಂದು ರಾತ್ರಿ ಗಂಟೆ 8.00 ರಿಂದ ಕ್ಷೇತ್ರದ ಪರಿವಾರ ದೈವಗಳಾದ ಕಲ್ಲುರ್ಟಿ ಮಂತ್ರದೇವತೆ ಸನ್ಯಾಸಿ ಗುಳಿಗ ಶಕ್ತಿ ಗುಳಿಗ ಹಾಗೂ ಇತರ ದೈವಗಳಿಗೆ ನೇಮೋತ್ಸವ ನಡೆಯಲಿರುವುದು
GOOGLE MAP
ನೇಸರ ಯೂಟ್ಯೂಬ್ ಚಾನೆಲ್
NESARA|| WhatsApp ||GROUPS |
---|
_–ಜಾಹೀರಾತು—