*ಹಿರಿಯರ ಸಂಸ್ಮರಣೆಯು ಪುಣ್ಯ ಕಾರ್ಯ: ಕಯ್ಯೂರು ನಾರಾಯಣ ಭಟ್
ವೈದಿಕರಾಗಿ ಮತ್ತು ತಂತ್ರಿಗಳಾಗಿ ಸಮಾಜದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯರ ಸಂಸ್ಮರಣೆಯ ಜೊತೆಗೆ ಕಳೆದ 27 ವರ್ಷಗಳಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸುತ್ತಿರುವುದು ನಿಜವಾಗಿಯೂ ಪುಣ್ಯದ ಕಾರ್ಯವೆಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ತಿಳಿಸಿದರು.
ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ವಿಷ್ಣು ಕುಮಾರ ನಿಲಯದಲ್ಲಿ ಪುತ್ತೂರು ಪರ್ಲಡ್ಕದ ಬಾರ್ಯ ಪ್ರತಿಷ್ಠಾನದ ವತಿಯಿಂದ ಜರಗಿದ ಸಂಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ವೇದಮೂರ್ತಿ ಪಚ್ಚಡಿಬೈಲು ಸುಬ್ರಹ್ಮಣ್ಯ ತಂತ್ರಿ ಅವರಿಗೆ ಬಾರ್ಯ ವಿಷ್ಣುಮೂರ್ತಿ ಪ್ರತಿಷ್ಠಾನದ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಸುಬ್ರಹ್ಮಣ್ಯ ತಂತ್ರಿ ಕೃತಜ್ಞತೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ಬಾರ್ಯ ಪ್ರಶಾಂತ್ ಕುಮಾರ್ ಬುನ್ನು ದಿ.ವಿಷ್ಣುಮೂರ್ತಿ ನೂರಿತ್ತಾಯರ ಕೊಡುಗೆಗಳನ್ನು ಸ್ಮರಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಭಾಸ್ಕರ ಬಾರ್ಯ ಮಾತನಾಡಿ ಪ್ರತಿಷ್ಠಾನದ ಕಾರ್ಯಕ್ರಮ ಆರಂಭದಲ್ಲಿ ಬಾರ್ಯ ನಂತರ ಉಪ್ಪಿನಂಗಡಿ, ಪುತ್ತೂರಿನಲ್ಲಿ ನಡೆಯುತ್ತಿದ್ದು ಮತ್ತೊಮ್ಮೆ ಬಾರ್ಯದ ವಿಶೇಷ ನೇಮೋತ್ಸವದಲ್ಲಿ ಜರಗುತ್ತಿರುವುದೊಂದು ಯೋಗ ವೆಂದರು.ಬಾರ್ಯ ಗ್ರಾಮದ ದೈವಗಳ ಗುರಿಕಾರನಾಗಿ ಸೇವೆಸಲ್ಲಿಸುವ ವಿಶೇಷ ಅವಕಾಶ ಲಭ್ಯವಾದ ನಿಮಿತ್ತ ಅವರು ಗುತ್ತಿನ ಮನೆಯವರನ್ನು ಗೌರವಿಸಿದರು.
ಶ್ರೀಮತಿ ಶ್ರುತಿ ಪ್ರದೀಪ್ ಪ್ರಾರ್ಥಿಸಿದರು. ಶ್ರೀಮತಿ ಪ್ರೇಮ ನೂರಿತ್ತಾಯ ಸನ್ಮಾನ ಪತ್ರ ವಾಚಿಸಿದರು. ಬಿ.ಸುಂದರ ನೂರಿತ್ತಾಯ ಸ್ವಾಗತಿಸಿ. ಶ್ರಿಮತಿ ಸ್ವರ್ಣಲತಾ ಭಾಸ್ಕರ ವಂದಿಸಿದರು. ಪ್ರತಿಷ್ಠಾನದ ಸಂಚಾಲಕ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಸದಸ್ಯರಾದ ನಾ.ಕಾರಂತ ಪೆರಾಜೆ, ಟಿ.ರಂಗನಾಥರಾವ್ ಬೊಳುವಾರು, ಪ್ರತ್ಯೂಷ್ ಬಾರ್ಯ ಕಾರ್ಯಕ್ರಮದ ಸಂಯೋಜನೆಗೆ ಸಹಕರಿಸಿದರು.