
ನಾಯಿ ಅಡ್ಡ ಬಂದು ಚಾಲಕನ ನಿಯಂತ್ರಣ ತಪ್ಪಿದ ಆಟೋ ರಿಕ್ಷವೊಂದು ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಅಲಂಕಾರ ಸಮೀಪದ ಸುರುಳಿ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ನಾಯ್ಕ್ ಗಾಯಗೊಂಡವರು. ಇವರು ತಮ್ಮ ಆಟೋದಲ್ಲಿ ಸುರಳಿ ಕಡೆಯಿಂದ ಅಲಂಕಾರಿಗೆ ಬರುವಾಗ ಸುರಳಿ ಸೇತುವೆಯ ಬಳಿ ಕಟ್ಟಾದ ಸ್ಥಳದಲ್ಲಿ ನಾಯಿ ಅಡ್ಡ ಬಂದಿದೆ. ತಕ್ಷಣ ಆಟೋ ಚಾಲಕ ಬ್ರೇಕ್ ಹಾಕಿದ ಪರಿಣಾಮ ಆಟೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಪರಿಣಾಮ ಆಟೋ ನುಚ್ಚುಗುಚ್ಚಾಗಿದೆ.
ಗಾಯಾಳುವನ್ನು ತಕ್ಷಣ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ. ಆಟೋದಲ್ಲಿ ಚಾಲಕ ಮಾತ್ರ ಇದ್ದು ಪ್ರಯಾಣಿಕರು ಇಲ್ಲದೆ ಇರುವುದರಿಂದ ಸಂಭಾವ್ಯ ಅಪಘಾತ ತಪ್ಪಿದೆ. ಘಟನೆ ನಡೆದ ಸ್ಥಳ ಅಪಾಯಕಾರಿಯಾಗಿದ್ದು ಇಕ್ಕಟ್ಟಾದ ಪರಿಣಾಮ ಇಲ್ಲಿ ಹತ್ತು ಹಲವು ಅಪಘಾತ ನಡಿದಿದೆ. ಇಲ್ಲಿ ರಸ್ತೆ ಅಗಲೀಕರಣ ಆಗಬೇಕೆಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.



