ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪದ್ಮರಾಜ್ ಪುಷ್ಪಾರ್ಚನೆ

ಶೇರ್ ಮಾಡಿ

ಸ್ವತಂತ್ರ ತುಳುನಾಡ ಆಳ್ವಿಕೆ ಆರಂಭಿಸಿದ ದಿನದ (ಎ.5) ನೆನಪಿನಲ್ಲಿ ನಗರದ ಬಾವುಟಗುಡ್ಡೆ ಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಶುಕ್ರವಾರ ಪುಷ್ಪಾರ್ಚನೆಗೈದರು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮೊದಲೇ ತುಳುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಿತ್ತು. ಇದನ್ನು ಅಮರ ಸುಳ್ಯದ ದಂಗೆ ಎಂದು ಕರೆದರೆ, ಇನ್ನೂ ಕೆಲವರು ತುಳುನಾಡ ಸ್ವಾತಂತ್ರ್ಯ ಸಂಗ್ರಾಮ ಎಂದೂ ಕರೆದರೆ. ಈ ಹೋರಾಟದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಪ್ರಮುಖ ಪಾತ್ರ ವಹಿಸಿದ್ದರು. ಈ ಹೋರಾಟದಲ್ಲಿ ಬ್ರಿಟಿಷರನ್ನು ಪರಾಭವಗೊಳಿಸಿದ ತುಳುನಾಡ ಹೋರಾಟಗಾರರು ಮುಂದಿನ 13 ದಿನಗಳ ಕಾಲ ಸ್ವತಂತ್ರ ತುಳುನಾಡನ್ನು ಆಳ್ವಿಕೆ ಮಾಡಿದ್ದರು. ಆ ಆಳ್ವಿಕೆಯನ್ನು ಎ.5ರಂದು ಆರಂಭಿಸಿದ್ದರು ಎಂಬುದು ಇತಿಹಾಸದಲ್ಲಿ ಉಲ್ಲೇಖಗೊಂಡಿವೆ. ಆ ಹಿನ್ನೆಲೆಯಲ್ಲಿ ಈ ನಾಡಿನ ಸ್ವಾತಂತ್ರ್ಯ ಕ್ಕಾಗಿ ತನ್ನ ಪ್ರಾಣಾರ್ಪಣೆಗೈದ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ತುಳುನಾಡ ಸಂಗ್ರಾಮದಲ್ಲಿ ಪಾಲ್ಗೊಂಡ ವೀರರಿಗೆ ಗೌರವ ಸಲ್ಲಿಸಲಾಯಿತು.

Leave a Reply

error: Content is protected !!