ಆನೆಗೊಂದಿ ಶ್ರೀ ಸರಸ್ವತಿ ಪೀಠ ಪಡುಕುತ್ಯಾರು ಅಧೀನದ ಶ್ರೀ ಸೂರ್ಯಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ಐದು ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಸಿದ್ಧ ಕಲಾವಿದರಿಂದ ಗುರುದಕ್ಷಿಣೆ ತಾಳಮದ್ದಳೆ ಜರಗಿತು.
ಭಾಗವತರಾಗಿ ಮೋಹನ ಆಚಾರ್ಯ ಕಲಂಬಾಡಿ, ಹಿಮ್ಮೆಳದಲ್ಲಿ ಗಣೇಶ ಕಾರಂತ ಪೊಳಲಿ, ವಿಶ್ವನಾಥ, ಮಾ.ಭವಿಷ್ ಕಲಂಬಾಡಿ, ಅರ್ಥಧಾರಿಗಳಾಗಿ ಎಂ.ಕೆ ರಮೇಶ ಆಚಾರ್ಯ ತೀರ್ಥಹಳ್ಳಿ(ದ್ರುಪದ), ದಿವಾಕರ ಆಚಾರ್ಯ ಗೇರುಕಟ್ಟೆ (ದ್ರೋಣ), ಕಾಪು ಜನಾರ್ದನ ಆಚಾರ್ಯ( ಏಕಲವ್ಯ), ರಂಗನಾಥ ಭಟ್ ಕಳತ್ತೂರು(ಅರ್ಜುನ) ಭಾಗವಹಿಸಿದ್ದರು.
ಅಸೆಟ್ ಸದಸ್ಯರಾದ ಜಿ.ಟಿ ಆಚಾರ್ಯ ಮುಂಬೈ, ಹರೀಶ ಆಚಾರ್ಯ, ಸಂಸ್ಥೆಯ ಮುಖ್ಯಸ್ಥ ಸಂಗೀತ ರಾವ್ ಕಲಾವಿದರನ್ನು ಗೌರವಿಸಿದರು.
ಶಿಕ್ಷಕ ಸುಧೀರ್ ನಾಯ್ಕ್ ಸ್ವಾಗತಿಸಿ, ಮಂಜುನಾಥ್ ಶೇಟ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಆಲೂರು ಹೊಸಹಳ್ಳಿಯ ಪುಟ್ಟಸ್ವಾಮಿ ಎಂಬವರ ಪುತ್ರ ಜ್ಯೋತಿಷ್(25ವ.), ನಿಂಗರಾಜು ಎಂಬವರ ಪುತ್ರ ಮೋಹನ್ಕುಮಾರ್(23ವ.)ಹಾಗೂ ಆಲೂರು ತೊರಗರವಳ್ಳಿ ನಿವಾಸಿ ಪಾಪಯ್ಯ ಎಂಬವರ ಪುತ್ರ ಗಣೇಶ (23ವ.) ಕಳವಿಗೆ ಯತ್ನಿಸಿದ ಆರೋಪಿಗಳಾಗಿದ್ದಾರೆ. ಇವರು ಎ.4ರಂದು ರಾತ್ರಿ 8 ಗಂಟೆಗೆ ಅಡ್ಡಹೊಳೆಯಲ್ಲಿ ರಸ್ತೆ ಬದಿಯಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಿದ್ದ 3 ಸೈನ್ ಬೋರ್ಡ್ಗಳನ್ನು ಕಳವುಗೈದು ಮಹೀಂದ್ರ ಪಿಕ್ಅಪ್ (ಕೆಎ02 ಎಸಿ 9426)ವಾಹನಕ್ಕೆ ಲೋಡ್ ಮಾಡುತ್ತಿದ್ದ ವೇಳೆ ರೌಂಡ್ಸ್ನಲ್ಲಿದ್ದ ಪೆರಿಯಶಾಂತಿ-ಅಡ್ಡಹೊಳೆ ನಡುವಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಿರ್ವಹಿಸುತ್ತಿರುವ ಎಸ್.ಎಂ ಔತಾಡ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿ ಅಡ್ಮಿನ್ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ನಿವಾಸಿ ಸಂಗಮ್ನಾಥ್ ಹಾಗೂ ಸಿಬ್ಬಂದಿ ಸಂಚಿತ್ ಪವಾರ್ ಅವರಿಗೆ ಸಿಕ್ಕಿಬಿದ್ದಿದ್ದಾರೆ. ಬಳಿಕ ಮೂವರು ಆರೋಪಿಗಳನ್ನು ಅವರ ವಾಹನ ಹಾಗೂ ಕಳವು ಮಾಡಿದ 3 ಸೈನ್ ಬೋರ್ಡ್ಗಳನ್ನು ಔತಾಡ್ ಸಂಸ್ಥೆಯ ಸಿಬ್ಬಂದಿಗಳು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಕಳವಿಗೆ ಯತ್ನಿಸಿದ್ದ 3 ಸೈನ್ ಬೋರ್ಡ್ಗಳ ಮೌಲ್ಯ 9ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಉಪ್ಪಿನಂಗಡಿ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.