ಬೆಳ್ತಂಗಡಿ ತಾಲೂಕಿನ ಕರಾಯ ಸರಕಾರಿ ಉನ್ನತೀಕರಿಸಿದ ಶಾಲೆಯ ಆವರಣದಲ್ಲಿ ಬೆಲೆಬಾಳುವ ಮರಗಳನ್ನು ಕಳ್ಳರು ಕಳವುಗೈದಿದ್ದಾರೆ.
ಬೆಳ್ತಂಗಡಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಗೆ ತಾಗಿಕೊಂಡಿದ್ದು, ಕೂಗಳತೆ ದೂರದಲ್ಲಿದ್ದು ಹತ್ತಕ್ಕೂ ಮಿಕ್ಕ ಮರಗಳನ್ನು ಶಾಲೆ ರಜೆ ದಿನಗಳಂದು ಕಡಿದು ಸಾಗಿಸಲಾಗಿದೆ. ಪುತ್ತೂರು ಉಪವಿಭಾಗಧಿಕಾರಿಗಳಿಗೆ ಖಚಿತ ಮಾಹಿತಿ ತಿಳಿದ ಮೇರೆಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.
ಈ ಮರಗಳನ್ನು ಶಾಲಾಭಿವೃದ್ಧಿ ಸಮಿತಿ ನೆಟ್ಟು ಬೆಳೆಸಿದ್ದು, ಮರಗಳನ್ನು ಪೀಠೊಪಕರಣಗಳ ರಚನೆಗಾಗಿ ಅವಕಾಶ ಕೇಳಿ ಮನವಿ ಸಲ್ಲಿಸಿದ್ದು, ಈಗಾಗಲೇ ಹಿರಿಯ ಅಧಿಕಾರಿಗಳ ಕಚೇರಿಯಲ್ಲಿ ಕಡತವಿತ್ತು. ಮರಗಳನ್ನು ಕಡಿಯಲು ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆಯವರು ಗುರುತು ಮಾಡಿ ಹೋಗಿದ್ದರು.