ನೆಲ್ಯಾಡಿ: ಚಾರ್ಮಾಡಿ ಘಾಟಿಯ 6ನೆ ತಿರುವಿನಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ತಾಂತ್ರಿಕ ತೊಂದರೆಯಿಂದ ರಸ್ತೆ ಮಧ್ಯೆ ಕೆಟ್ಟು ನಿಂತು ಹಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬಸ್ ರಸ್ತೆ ಮಧ್ಯೆಯೇ ನಿಂತ ಕಾರಣ ಅಗಲ ಕಿರಿದಾದ ಘಾಟಿಯ ಈ ಪರಿಸರದಲ್ಲಿ ಸುಮಾರು ಅರ್ಧ ಗಂಟೆಗಿಂತ ಅಧಿಕ ಕಾಲ ಟ್ರಾಫಿಕ್ ಜಾಮ್ ಕಂಡು ಬಂತು. ಹಲವರು ಬೇಕಾಬಿಟ್ಟಿ ವಾಹನಗಳನ್ನು ನುಗ್ಗಿಸಿ ಇನ್ನಷ್ಟು ಸಮಸ್ಯೆ ಸೃಷ್ಟಿಸಿದರು.
ಡೀಸೆಲ್ ಸರಬರಾಜು ಮಾಡುವ ಪೈಪ್ ನಲ್ಲಿ ಕಂಡುಬಂದಿದ್ದ ಸಮಸ್ಯೆಯನ್ನು ಸರಿಪಡಿಸಿದ ನಂತರ ಬಸ್ ತನ್ನ ಪ್ರಯಾಣ ಮುಂದುವರಿಸಿತು.
ಘಾಟಿಯಲ್ಲಿ ಕಾಡಾನೆಯ ಭಯ, ನೆಟ್ವರ್ಕ್ ಸಮಸ್ಯೆ, ಶೌಚಾಲಯ ಇಲ್ಲದಿರುವುದು ಇತ್ಯಾದಿ ಕಾರಣದಿಂದ ಪ್ರಯಾಣಿಕರು ಪರದಾಡುವಂತಾಯಿತು.