ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ನೈನಾನ್ ಗ್ರೇಸಿ ದಂಪತಿಗಳಿಗೆ ಸನ್ಮಾನ

ಶೇರ್ ಮಾಡಿ

ನೆಲ್ಯಾಡಿ : ನೆಲ್ಯಾಡಿ ಯ ಕೊಪ್ಪ ನಿವಾಸಿ ನಿವೃತ್ತ ಭಾರತೀಯ ನೌಕಾ ಸೇನೆಯ ಮರ್ಚೆಂಟ್ ನೇವಿಯ ನಿವೃತ್ತ ಉದ್ಯೋಗಿ, ನೆಲ್ಯಾಡಿ ವರ್ತಕ ಸಂಘ, ಕಟ್ಟಡ ಮಾಲೀಕರ ಸಂಘ, ಸಂತ ಅಲ್ಫೋನ್ಸ ಚರ್ಚ್ ನ ಕೋಶಾಧಿಕಾರಿ ಹೀಗೆ ನೆಲ್ಯಾಡಿ ಪರಿಸರದಲ್ಲಿ ಹತ್ತು ಹಲವು ಸಾಮಾಜಿಕ, ರಾಜಕೀಯ ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರವಾದ ಕೊಡುಗೆಯನ್ನು ನೀಡಿರುವ ಓಲಿಕ್ಕಲ್ ನೈನಾನ್ ಗ್ರೇಸಿ ದಂಪತಿಗಳು ಮಾಂಗಲ್ಯ ಬದುಕಿನ ಐವತ್ತು ಸುವರ್ಣ ವರ್ಷಗಳ ಜೂಬಿಲಿಯನ್ನು ಮೇ 18ರಂದು ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ಧರ್ಮಾಧ್ಯಕ್ಷರಾದ ಅತಿ ವಂದನಿಯ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಅವರು ಬಲಿಪೂಜೆಯನ್ನು ಮಾಡಿ ಶುಭವನ್ನು ಹಾರೈಸಿದರು. ಧರ್ಮ ಗುರುಗಳಾದ ವಂದನಿಯ ಫಾ.ಶಾಜಿ ಮಾತ್ಯು, ಫಾ.ವರ್ಗೀಸ್, ಪುದಿಎಡತ್ತಿಲ್ಫಾ ಸಿಬಿ ಪನಚಿಕ್ಕಾಲ್, ಫಾ.ಕುರಿಯಾಕೋಸ್ ವೆಟ್ಟು ವಯಿ, ಫಾ.ಜೋಸ್ ವಲಿಯಪರಂಬಿಲ್ ಮುದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!