ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳಿಗೆ ಗೌರವಾರ್ಪಣೆ

ಶೇರ್ ಮಾಡಿ

ನೆಲ್ಯಾಡಿ: ಹಿರಿಯ ಯಕ್ಷಗಾನ ಅರ್ಥಧಾರಿ ಮೂಡಂಬೈಲು ಸಿ.ಗೋಪಾಲಕೃಷ್ಣ ಶಾಸ್ತ್ರಿ ಅವರನ್ನು ಬೆಳ್ತಂಗಡಿ ತಾಲೂಕಿನ ಪಡಂಗಡಿ ಶ್ರೀನಿಲಯದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.

88 ವರ್ಷದ ಹಿರಿಯ ವಿದ್ವಾಂಸರಾದ ಶಾಸ್ತ್ರಿಯವರು ಮಹಾಭಾರತ ಕೋಶ, ರಾಮಾಯಣ ಕೋಶ, ಭಾಗವತ ಕೋಶ, ಪುರಾಣ ಕಥಾ ಚಿಂತಾ ರತ್ನ ಮುಂತಾದ ಅಪೂರ್ವ ಕೃತಿಗಳನ್ನು ರಚಿಸಿದ್ದು ಯಕ್ಷಗಾನಾಸಕ್ತರಿಗೆ ಬಹಳ ಉಪಯುಕ್ತವಾಗಿದೆ. ಶೇಣಿ, ಸಾಮಗ, ಪೆರ್ಲ ಮೊದಲಾದ ಮಹಾನ್ ಕಲಾವಿದರೊಂದಿಗೆ ಅರ್ಥಧಾರಿಯಾಗಿ ಜನಪ್ರಿಯರಾಗಿದ್ದ ಇವರು ಕಳೆದ ಮೂರು ವರ್ಷಗಳಿಂದ ವಿಶ್ರಾಂತ ಜೀವನವನ್ನು ನಡೆಸುತ್ತಾ ತನ್ನ ಜ್ಞಾನ, ಅನುಭವಗಳನ್ನು ಕಲಾಸಕ್ತರ ಜೊತೆ ಹಂಚಿಕೊಳ್ಳುತ್ತ ಸಕ್ರಿಯರಾಗಿದ್ದಾರೆ.

ಪ್ರತಿಷ್ಠಾನದ ಸಹ ಸಂಚಾಲಕರಾದ ಭಾಸ್ಕರ ಬಾರ್ಯ, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಸ್ವರ್ಣಲತಾ ಭಾಸ್ಕರ್ ಉಪಸ್ಥಿತರಿದ್ದರು

Leave a Reply

error: Content is protected !!