ಲೋಕಸಭೆಯ ಫಲಿತಾಂಶ ಬಹುತೇಕ ಇದೀಗ ಹೊರಬಿದ್ದಿದ್ದು, ಎನ್ ಡಿ ಎ ಸುಮಾರು 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದಿದ್ದು ಅಲ್ಲದೆ ಇಂಡಿಯಾ ಮೈತ್ರಿಕೂಟ ಕೂಡ 230 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಇಂಡಿಯಾ ಹೊಸ ರಣತಂತ್ರ ಒಂದು ಹೆಣೆದಿದ್ದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಅವರ ಜೊತೆ ಹೇಗೆ ಮಾತುಕತೆ ನಡೆಸಿದ್ದು ಭರ್ಜರಿ ಆಫರ್ ಒಂದನ್ನು ನೀಡಿದೆ ಎಂದು ಹೇಳಲಾಗುತ್ತಿದೆ.
ಹೌದು ಕಿಂಗ್ ಮೇಕರ್ ಎಂದೇ ಹೇಳಲಾಗುತ್ತಿರುವ ಚಂದ್ರಬಾಬು ನಾಯ್ಡು ಹಾಗೂ ನೀತಿಶ್ ಕುಮಾರ್ ಅವರಿಗೆ ಇಂಡಿಯಾ ಮೈತ್ರಿಕೂಟ ಭರ್ಜರಿ ಆಫರ್ ನೀಡಿದೆ ನಿತೀಶ್ ಕುಮಾರ್ ಗೆ ಉಪ ಪ್ರಧಾನಿ ಪಟ್ಟದ ಆಫರ್ ನೀಡಿದ ಇಂಡಿಯಾ ಮೈತ್ರಿಕೂಟ, ಅಲ್ಲದೆ ಆಂಧ್ರಪ್ರದೇಶಕ್ಕೆ ಕೂಡ ವಿಶೇಷ ಸ್ಥಾನಮಾನದ ಆಫರ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ NCP ನಾಯಕ ಶರದ್ ಪವಾರ್ ಅವರು ಮಾತನಾಡಿ, ಇಂಡಿಯಾ ಮೈತ್ರಿಕೂಟ ನಾಯಕರ ಜೊತೆಗೆ ಚರ್ಚಿಸುದ್ದೇನೆ. ಹಿಂದಿ ಪ್ರಾಬಲ್ಯ ರಾಜ್ಯಗಳಲ್ಲಿ ಇಂಡಿಯಾ ಉತ್ತಮ ಕೆಲಸ ಮಾಡಿದೆ. ನಾಳೆ ಇಂಡಿಯಾ ಮೈತ್ರೀಕೂಟದ ಸಭೆ ಕರೆಯಲಾಗಿದೆ ಎಂದು NCP ನಾಯಕ ಶರತ್ ಪವಾರ್ ಮಾಹಿತಿ ನೀಡಿದ್ದಾರೆ.
ಇಂಡಿಯಾ ಮೈತ್ರಿಕೂಟದಲ್ಲಿ ನಂಬರ್ ಗೇಮ್ ಲೆಕ್ಕಚಾರ ಜೋರಾಗುತ್ತಿದ್ದು, ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಜೊತೆಗೆ ಶರತ್ ಅವರು ಸಂಪರ್ಕ ನಡೆಸಿದ್ದಾರೆ. ಇಬ್ಬರ ಜೊತೆಗೆ ನಾನು ಸಂಪರ್ಕದಲ್ಲಿ ಇದ್ದೇನೆ ಅದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.