ಬoದಾರು: ರಾಷ್ಟಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ವಿದ್ಯಾರ್ಥಿನಿಯರ ತಂಡ 9 ವರ್ಷಗಳಿಂದ ಸಾಧನೆ ಮಾಡಿರುವ ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಪೋಷಕರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಒಕ್ಕೂಟದ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಬಂದಾರು ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಸದಸ್ಯರುಗಳಿಂದ ಶ್ರಮದಾನ ಕೈಗೊಳ್ಳಲಾಯಿತು.
ಶಾಲಾ ಮೈದಾನವನ್ನು ಸ್ವಚ್ಛಗೊಳಿಸಿ ಮತ್ತು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಯಿತು. ಶಾಲೆಯ ಸುತ್ತಮುತ್ತಲಿನ ಹುಲ್ಲು ಗಿಡ ಗಂಟಿಗಳನ್ನು ತೆಗೆದುಹಾಕಿ ಮಕ್ಕಳಿಗೆ ಆಟವಾಡಲು ವಾಲಿಬಾಲ್ ಅಂಕಣ ಮತ್ತು ಖೋಖೋ ಅಂಕಣವನ್ನು ಸಜ್ಜುಗೊಳಿಸಲಾಯಿತು. ಸೋರುತ್ತಿರುವ ಛಾವಣಿಯ ಹಂಚುಗಳನ್ನು ಸರಿಪಡಿಸಿ, ಮಧ್ಯಾಹ್ನ ಬಿಸಿ ಊಟಕ್ಕಾಗಿ ತರಕಾರಿ ತೋಟವನ್ನು ನಿರ್ಮಿಸಲಾಯಿತು, ಅಡಿಕೆ ತೋಟವನ್ನು ಸ್ವಚ್ಛಗೊಳಿಸಿ, ಸತ್ತುಹೋಗಿರುವ ಅಡಿಕೆ ಗಿಡಗಳ ಬದಲಿಗೆ ಹೊಸ ಸಸಿಗಳನ್ನು ನೆಡಲಾಯಿತು. ಈ ಶ್ರಮದಾನ ಕಾರ್ಯವು ಬೆಳಗ್ಗೆ ಯಿಂದ ಸಂಜೆಯ ತನಕ ಶ್ರಮದಾನ ನಡೆಯಿತು.