ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ಸ್ಯಾಮ್ಸಂಗ್ ಮೊಬೈಲ್ ವಿತರಣೆ

ಶೇರ್ ಮಾಡಿ

ಅಂಗನವಾಡಿ ಕೆಲಸ ಕಾರ್ಯಗಳನ್ನು ಸುಗಮವಾಗಿಸುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರಿಗೆ ಹೊಸ ಸ್ಮಾರ್ಟ್ ಫೋನ್ ಗಳನ್ನು ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದೆ.

ರಾಜ್ಯಾದ್ಯಂತ 65,000 ಕಾರ್ಯಕರ್ತೆಯರು ಮತ್ತು 3 ಸಾವಿರಕ್ಕೂ ಅಧಿಕ ಮೇಲ್ವಿಚಾರಕರಿಗೆ ಸ್ಯಾಮ್ಸಂಗ್ ಮೊಬೈಲ್ ನೀಡಲಾಗುವುದು.

ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಟೆಂಡರ್ ಕರೆದು ಸ್ಮಾರ್ಟ್ಫೋನ್ ಗಳನ್ನು ಖರೀದಿಸಲಾಗಿದೆ. ಶೀಘ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಗಳನ್ನು ವಿತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಈ ಹಿಂದೆ ನೀಡಿದ ಮೊಬೈಲ್ ಗಳು ಗುಣಮಟ್ಟದಿಂದ ಕೂಡಿರಲಿಲ್ಲ. ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಳಪೆ ಗುಣಮಟ್ಟದ ಮೊಬೈಲ್ ಗಳಿಂದ ಮಾಹಿತಿ ದಾಖಲಿಸಲಾಗುತ್ತಿಲ್ಲ ಎಂದು ದೂರಿದ್ದರು. ಈಗ ಸ್ಯಾಮ್ಸಂಗ್ ಕಂಪನಿಯ ಗುಣಮಟ್ಟದ ಮೊಬೈಲ್ ಗಳನ್ನು ನೀಡಲಾಗುವುದು ಎಂದು ಹೇಳಲಾಗಿದೆ.

Leave a Reply

error: Content is protected !!