ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನಲ್ಲಿ ಶಾಲಾ ಸಂಸತ್ತಿನ ಚುನಾವಣೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಶಾಲಾ ಮಂತ್ರಿಮಂಡಲದ ಚುನಾವಣೆಯು ಪ್ರಜಾಪ್ರಭುತ್ವ ಮತದಾನದ ಮಾದರಿಯಲ್ಲಿ ನಡೆಯಿತು.

ಮತಯಂತ್ರದ ಮೂಲಕ ಚುನಾವಣೆಯನ್ನು ಬೆಥನಿ ಐಟಿಐ ಸಂಸ್ಥೆಯ ಶಿಕ್ಷಕರಾದ ಸುನಿಲ್‌ರವರ ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿಗಳು ನೆರವೇರಿಸಿದರು.

ಚುನಾವಣಾಧಿಕಾರಿಗಳಾಗಿ ಶಿಕ್ಷಕರು ಕರ್ತವ್ಯ ನಿರ್ವಹಿಸಿದರು. ಶಾಲಾ ಪ್ರಧಾನ ಮಂತ್ರಿಯಾಗಿ ರಿಸ್ಟನ್ ರಾಯ್, ಉಪಪ್ರಧಾನಿಯಾಗಿ ಏಂಜೆಲ್ ಕೆ.ಪಿ., ಪ್ರತಿಪಕ್ಷ ನಾಯಕರಾಗಿ ಅಶುರ ಮತ್ತು ಫಾತಿಮತ್ ಅಪ್ನ ಆಯ್ಕೆಯಾದರು. ಗೃಹಮಂತ್ರಿಯಾಗಿ ಅಲೆನ್‌ಶಿಬು ಜಾನ್, ವಿದ್ಯಾಮಂತ್ರಿಯಾಗಿ ಲಲಿತ ವಿ.ಡಿ., ಕಮ್ಯುನಿಕೇಶನ್ ಮಂತ್ರಿಯಾಗಿ ಸೋನಾ ಮರಿಯ, ಸಾಂಸ್ಕೃತಿಕ ಮಂತ್ರಿಯಾಗಿ ಕ್ಷಿತಿ ಜೈನ್, ಸಂಸದೀಯ ಮಂತ್ರಿಯಾಗಿ ಜೋಯೆಲ್ ಪಿ.ಜೆ., ಕ್ರೀಡಾ ಮಂತ್ರಿಯಾಗಿ ಆಶಿಸ್ ಬೋಸ್, ಆರೋಗ್ಯ ಮಂತ್ರಿಯಾಗಿ ಶಿಫಾ ಎಸ್., ಹಾಗೂ ಉಪಮಂತ್ರಿಗಳಾಗಿ ಅಬ್ದುಯಿಲ್, ತೋಮಸ್, ಆಲ್ಜಿನ್ ಜಾರ್ಜ್, ಸ್ಪಿತಿನ್ ವಿನೋದ್, ಸೆಲ್ಮ ಪಿ.ಜೆ., ಬಿಬಿನ್ ಜೋಸೆಫ್, ಬಿಲಾಲ್ ಹಾಗೂ ಸೃಜನಾ ದಾಂಬ್ಲೆ ಆಯ್ಕೆಯಾದರು. ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಚಾಲಕರಾದ ರೆ.ಫಾ.ಜೈಸನ್ ಸೈಮನ್ ಒಐಸಿಯವರು ಶುಭಹಾರೈಸಿದರು.

Leave a Reply

error: Content is protected !!