ನೆಲ್ಯಾಡಿ: ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿರುವ ಘಟನೆ ಶಿರಾಡಿ ಗ್ರಾಮದಲ್ಲಿ ಜೂ.17ರಂದು ರಾತ್ರಿ ನಡೆದಿದೆ.
ಶಿರಾಡಿ ನಿವಾಸಿ ದಿವಾಕರ ಗೌಡ ಅವರ ತೋಟಕ್ಕೆ ನಾಲ್ಕರಿಂದ ಆರು ಆನೆಗಳು ದಾಳಿ ನಡೆಸಿವೆ ಎಂದು ಅಂದಾಜಿಸಲಾಗಿದ್ದು ಅಡಿಕೆ, ತೆಂಗು, ಬಾಳೆ ಕೃಷಿಗಳನ್ನು ಹಾನಿಗೊಳಿಸಿವೆ. ಅಲ್ಲದೇ ತೋಟಕ್ಕೆ ಅಳವಡಿಸಿರುವ ಸ್ಪ್ರಿಂಕ್ಲರ್‍ಗಳನ್ನೂ ಕಾಡಾನೆಗಳು ಪುಡಿಗೈದಿವೆ. ಘಟನೆಯಿಂದಾಗಿ ದಿವಾಕರ ಗೌಡ ಅವರಿಗೆ ಸಾವಿರಾರು ರೂ. ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.
ಈ ಭಾಗದಲ್ಲಿ ಕಾಡಾನೆಗಳು ಪದೇ ಪದೇ ದಾಳಿ ನಡೆಸಿ ಕೃಷಿ ಹಾನಿಗೊಳಿಸುತ್ತಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಾಡಾನೆಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.