ನೇಸರ ಫೆ.17: 40 ವರ್ಷ ವಯೋಮಾನ ದಾಟಿದ ಜೇಸಿಗಳಿಗೆ ತನ್ನ ಅನುಭವಗಳನ್ನು ಸಮಾಜಮುಖಿ ಕಾರ್ಯಗಳಿಗೆ ಧಾರೆಯೆರೆಯಲು,ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಲು ವೇದಿಕೆಯನ್ನು ಕಲ್ಪಿಸಿಕೊಡುವ ಸಂಸ್ಥೆ ಇಂಟರ್ನ್ಯಾಷನಲ್ ಸೀನಿಯರ್ ಛೇಂಬರ್ ಸಂಸ್ಥೆ, ವ್ಯಕ್ತಿಯನ್ನು ವ್ಯಕ್ತಿತ್ವವನ್ನಾಗಿ ಮಾಡುತ್ತದೆ ಜೇಸಿ.2015-16 ರಲ್ಲಿ ಸೀನಿಯರ್ ಛೇಂಬರ್ ಕರ್ನಾಟಕದಲ್ಲಿ ಆರಂಭವಾಯಿತು.ಪ್ರಪ್ರಥಮವಾಗಿ ಮಂಗಳೂರಿನಲ್ಲಿ ಘಟಕ ಆರಂಭವಾಯಿತು. ನಂತರ ಹಂತ ಹಂತವಾಗಿ ಇದೀಗ ಕರ್ನಾಟಕದಲ್ಲಿ 37 ಲೀಜನ್ ಗಳು ಆರಂಭವಾಗಿವೆ. ಸಾರ್ವಜನಿಕವಾಗಿ ನಮ್ಮನ್ನು,ನಮ್ಮ ಸಮಸ್ಯೆಯನ್ನು ಗುರುತಿಸ ಬೇಕಾದರೆ ಸಾರ್ವಜನಿಕರಿಗೆ ನಾವು ಏನು ಮಾಡಿದ್ದೇವೆ ಎಂಬುದು ಮುಖ್ಯ,ನೆಲ್ಯಾಡಿ ಲೀಜನ್ ನವರ ವತಿಯಿಂದ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಸ್ಥಾಪಿತವಾದ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಯೋಜನೆಯ ಟ್ಯಾಂಕನ್ನು ರಾಷ್ಟ್ರಾಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ಸೀನಿಯರ್ ಛೇಂಬರ್ ನ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಅರವಿಂದ ಕೇದಿಗೆ ಯವರು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಟರ್ನ್ಯಾಷನಲ್ ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜನ್ ನ ಅಧ್ಯಕ್ಷ ಡಾ.ಸದಾನಂದ ಕುಂದರ್ ವಹಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರೀಯ ನಿರ್ದೇಶಕರಾದ ಚಿತ್ರ ಕುಮಾರ್ ಮಾತನಾಡಿ ನೆಲ್ಯಾಡಿ ಲೀಜನ್ ಮಾಡಿದಂತಹ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ,ಲೀಜನ್ ಗೆ ಶುಭಕೋರಿದರು. ನೆಲ್ಯಾಡಿ ಲೀಜನ್ ನ ಸ್ಥಾಪಕ ಅಧ್ಯಕ್ಷರಾದ ಅಬ್ರಹಾಂ ವರ್ಗೀಸ್ ರವರು ರಾಷ್ಟ್ರಾಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು.
ಈ ಸಂದರ್ಭದಲ್ಲಿ ನೆಲ್ಯಾಡಿ ಲೀಜನ್ ನ ವತಿಯಿಂದ ರಾಷ್ಟ್ರಾಧ್ಯಕ್ಷರನ್ನು,ರಾಷ್ಟ್ರೀಯ ನಿರ್ದೇಶಕರನ್ನು ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಹಿರಿಯರಾದ ಮಾಧವ ಗೌಡರನ್ನು, ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದ ಸುನಂದಾ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರಾಷ್ಟ್ರಾಧ್ಯಕ್ಷರ ಭೇಟಿಯ ನೆನಪಿಗಾಗಿ ನೆಲ್ಯಾಡಿ ಲೀಜನ್ ನ ಸ್ಥಾಪಕ ಅಧ್ಯಕ್ಷರಿಗೆ,ಅಧ್ಯಕ್ಷರಿಗೆ ಕಾರ್ಯದರ್ಶಿಗೆ ಹಾಗೂ ಸದಸ್ಯರಿಗೆ ವಿಶೇಷ ಪಿನ್ ಒಂದನ್ನು ನೀಡಿ ರಾಷ್ಟ್ರಧ್ಯಕ್ಷರು ಗೌರವಿಸಿದರು.
ಜೇಸಿವಾಣಿಯನ್ನು ನಾರಾಯಣ ಬಲ್ಯಾಯ ವಾಚಿಸಿದರು, ಕಾರ್ಯದರ್ಶಿ ಪ್ರಶಾಂತ್ ಸಿ.ಎಚ್ ಧನ್ಯವಾದ ನೀಡಿದರು. ಅತಿಥಿ-ಗಣ್ಯರೆಲ್ಲರನ್ನು ವೇದಿಕೆಗೆ ರವೀಂದ್ರ.ಟಿ ಆಹ್ವಾನಿಸಿದರು.
—ಜಾಹೀರಾತು—