ನೆಲ್ಯಾಡಿ: ಇಚ್ಚಂಪಾಡಿ ನೇರ್ಲ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 2024- 25ನೇ ಸಾಲಿನ ಶಾಲಾಮಂತ್ರಿ ಮಂಡಲವನ್ನು ಮತದಾನದ ಮೂಲಕ ಆಯ್ಕೆ ಮಾಡಲಾಯಿತು.
ಶಾಲಾ ಮುಖ್ಯಮಂತ್ರಿಯಾಗಿ ಸಿಂಚನ ಹಾಗೂ ಉಪಮುಖ್ಯಮಂತ್ರಿಯಾಗಿ ಯೋಗಿತಾ ಆಯ್ಕೆಯಾದರು. ಗೃಹ ಮಂತ್ರಿಯಾಗಿ ಭವಿತ್, ಪ್ರದ್ಯುಮ್, ಪ್ರೇಮಲತಾ, ಶ್ರಾವ್ಯ, ಸಹಾಯಕ ಮಂತ್ರಿಗಳಾಗಿ ಜ್ಯೋತಿ, ಸುಶ್ವಿತ್, ಶಿಕ್ಷಣ ಮಂತ್ರಿಗಳಾಗಿ ಅನ್ವಿತಾ, ಪೂರ್ಣೇಶ್, ಜಿತೇಶ್, ಆರೋಗ್ಯ ಮಂತ್ರಿಗಳಾಗಿ ತನುಷಾ, ರಶ್ಮಿ, ಸಾಂಸ್ಕೃತಿಕ ಮಂತ್ರಿಗಳಾಗಿ ದೀಕ್ಷಾ, ತನುಷಾ, ದಕ್ಷಾ.ಕೆ, ವಾರ್ತಾ ಮಂತ್ರಿಗಳಾಗಿ ಶ್ರಾವಣಿ, ಸಂಭ್ರಮ್, ಶುಚಿತ್ವ ಮತ್ತು ಶಿಸ್ತು ಮಂತ್ರಿಗಳಾಗಿ ಆಲನ್, ಲತೀಶ್, ದಿವೀಶ್, ಆದಿರ, ವಂದನ, ನೀರಾವರಿ ಮಂತ್ರಿಗಳಾಗಿ ಪ್ರೀತಂ, ಲಿಖಿತ್, ಮೋಕ್ಷಿತ್, ಗಗನ್, ಮಾನ್ವಿ, ಮಾನ್ಯ, ಸಾನ್ವಿತಾ, ಕೃಷಿ ಮಂತ್ರಿಗಳಾಗಿ ವಿಷ್ಣು ಪ್ರಸಾದ್, ಆಗಸ್ಟಿನ್, ಜನ್ಮಿತಾ, ಅನುಷಾ, ಕ್ರೀಡಾ ಮಂತ್ರಿಯಾಗಿ ರಂಜನ್, ಗ್ರಂಥಾಲಯ ಮಂತ್ರಿಗಳಾಗಿ ರೋಶಿನಿ, ಪೂರ್ವಿ, ಶಾಲಾ ವಿರೋಧ ಪಕ್ಷದ ನಾಯಕನಾಗಿ ಶ್ರೇಯಸ್ ಆಯ್ಕೆಯಾಗಿದ್ದಾರೆ.
ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ.ಎಸ್ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಯಿತು.