ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗೊಳಿತೊಟ್ಟು ವಲಯ ಆಲಂತಾಯ ಕಾರ್ಯಕ್ಷೇತ್ರದಲ್ಲಿ ಗಿಡ ನಾಟಿ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮ

ಶೇರ್ ಮಾಡಿ

ಕಡಬ : ಗೊಳಿತೊಟ್ಟು ವಲಯದ ಆಲಂತಾಯ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗಿಡ ನಾಟಿ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮವನ್ನು ಕಳೆದ ಸೋಮವಾರದಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಮಕ್ಕಳು ಪ್ರಾರ್ಥನೆ ಗೀತೆ ಹಾಡುವುದರ ಮುಖಾಂತರ ಪ್ರಾರಂಭಿಸಿದರು.

ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ SDMC ಅಧ್ಯಕ್ಷರಾದ ಅಶೋಕರವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಲವ್ಲಿ ಜೋಸ್ ,ಶಾಲಾ ಶಿಕ್ಷಕರಾದ ವರ್ಗಿಸ್ ಕೆ .ಸಿ , ವಲಯದ ಮೇಲ್ವಿಚಾರಕರಾದ ಜಯಶ್ರೀ ,ಯೋಜನೆಯ ಕೃಷಿ ಅಧಿಕಾರಿಯಾದ ಸೋಮೇಶ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿಯವರು ಪರಿಸರ ಜಾಗೃತಿಯ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದರ ಮೂಲಕ ಪರಿಸರವನ್ನು ಕುರಿತು ಮಕ್ಕಳಿಗೆ ನಿಮ್ಮ ಹುಟ್ಟು ಹಬ್ಬದಂದು ಒಂದು ಸಸಿ ನೆಡಿಸಿ ಹುಟ್ಟು ಹಬ್ಬ ಆಚರಿಸಿಕೊಳ್ಳಿ ಎಂದು ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ವಹಿಸುವ ಹಾಗೆ ತಿಳಿಸಿದ್ದರು.

ಶಾಲಾ ಶಿಕ್ಷಕರಾದ ವರ್ಗಿಸ್. ಕೆ.ಸಿ ಪರಿಸರದ ಬಗ್ಗೆ ಮತ್ತು ಪ್ಲಾಸ್ಟಿಕ್ ಸುಡುವುದರಿಂದ ಆಗುವ ಪರಿಣಾಮಕಾರಿಯ ಬಗ್ಗೆ ತಿಳಿಸುವುದರ ಜೊತೆಗೆ ಪ್ರತಿಯೊಬ್ಬರು ಮನೆಯಲ್ಲಿ ಯಾವುದೇ ಹಬ್ಬ ಹರಿದಿನಗಳಂದು ನಿಮ್ಮ ಮನೆ, ದೇವಸ್ಥಾನ ಅಂಗಳದಲ್ಲಿ ಅಥವಾ ಶಾಲಾ ವಠಾರದಲ್ಲಿ ಗಿಡವನ್ನು ನೆಡಬೇಕು ಎಂದು ಮಾಹಿತಿ ನೀಡಿದ್ದರು.

SDMC ಅಧ್ಯಕ್ಷರಾದ ಅಶೋಕ ಪರಿಸರದ ಬಗ್ಗೆ ಮಾಹಿತಿ ನೀಡಿದ್ದರು.ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು , ಶಿಕ್ಷಕರ ವಲಯದ ಮೇಲ್ವಿಚಾರಕರು, ಯೋಜನೆಯ ಕೃಷಿ ಅಧಿಕಾರಿಯವರು, ಸ್ಥಳೀಯ ಸೇವಾಪ್ರತಿನಿಧಿಯಾದ ಹೇಮಲತಾ, ಸ್ವಸಹಾಯ ಸಂಘದ ಸದಸ್ಯರು, ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

error: Content is protected !!