
ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಹಾವುಗಳು ಮನೆಯೊಳಗೆ ಬರುವ, ಮನೆ ಅಕ್ಕ ಪಕ್ಕದಲ್ಲಿನ ಪೊದೆಗಳಲ್ಲಿ ಅವಿತು ಕುಳಿತುಕೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲೊಂದು ಹಾವು ಮಲಗಿದ್ದವನ ಚಡ್ಡಿಯೊಳಗೆಯೇ ಅವಿತು ಕುಳಿತುಬಿಟ್ಟಿದೆ. ಬಹಳ ಜೋಪಾನವಾಗಿ ಅವಿತು ಕುಳಿತ ಹಾವನ್ನು ಹೊರತೆಗೆಯಲಾಗಿದ್ದು, ಈ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಮಳೆಗಾಲ ಬಂತೆಂದರೆ ಸಾಕು ಕಾಯಿಲೆಗಳ ಜೊತೆ ಜೊತೆಗೆ ಹಾವು, ಕೀಟಗಳ ಕಾಟವು ಹೆಚ್ಚಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಹಾವುಗಳ ಕಾಟ ತುಸು ಹೆಚ್ಚಾಗಿಯೇ ಇರುತ್ತದೆ ಅಂತಾನೇ ಹೇಳಬಹುದು. ಈ ಹಾವುಗಳನ್ನು ಕಂಡರೆ ಎಂಥ ಧೈರ್ಯವಂತ ಮನುಷ್ಯನಿಗಾದರೂ ಒಮ್ಮೆ ಭಯವಾಗುತ್ತದೆ. ದಾರಿಯಲ್ಲಿ ಹೋಗುತ್ತಿರುವಾಗ ಎದುರಿಗೆ ಹಾವು ಕಂಡರೂ ಸಾಕು ಮೈ ಪೂರಾ ಬೆವರಿ ಬಿಡುತ್ತದೆ. ಒಂದು ವೇಳೆ ಮನೆಯೊಳಗೆ ಹಾವು ಬಂದರೆ ನಾವು ಅಲ್ಲಿಂದ ಕಾಲ್ಕಿತ್ತು ಬಿಡುತ್ತೇವೆ. ಅಂತದ್ರಲ್ಲಿ ಇಲ್ಲೊಬ್ಬ ಯುವಕನ ಚಡ್ಡಿಯೊಳಗೆಯೇ ಹಾವೊಂದು ಅವಿತು ಕುಳಿತು, ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಈ ಘಟನೆ ಥೈಲ್ಯಾಂಡ್‌ನ ರೇಯಾಂಗ್ ಎಂಬಲ್ಲಿ ನಡೆದಿದ್ದು, ಮನೆಯಲ್ಲಿ ಮಂಚದ ಮೇಲೆ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದ ಯುವಕನ ಬಳಿ ಬಂದ ಹಾವೊಂದು ಸೀದಾ ಹೋಗಿ ಆತನ ಚಡ್ಡಿಯೊಳಗೆ ಸೇರಿ ಬಿಟ್ಟಿದೆ. ಇದರಿಂದ ಭಯಬೀತನಾದ ಆ ಯುವಕ ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳದೆ ಉರಗ ತಜ್ಞರಿಗೆ ಕರೆ ಮಾಡಿ ಅವರು ಬರುವವರೆಗೂ ಸ್ವಲ್ಪವೂ ಅಲುಗಾಡದೆ ಧೈರ್ಯದಿಂದ ಅಲ್ಲೇ ಮಲಗುತ್ತಾನೆ. ನಂತರ ಉಗರ ತಜ್ಞರು ಬಂದು ಸ್ನೇಕ್ ಹುಕ್ ಸಹಾಯದಿಂದ ಜೋಪಾನವಾಗಿ ಹಾವನ್ನು ಹೊರ ತೆಗೆದಿದ್ದಾರೆ.
@unikinfold ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, “ಥೈಲ್ಯಾಂಡ್‌ನ ರೇಯಾಂಗ್ ಪ್ರಾಂತ್ಯದಲ್ಲಿ ವ್ಯಕ್ತಿಯ ಚಡ್ಡಿಯೊಳಗೆ ಸೇರಿಕೊಂಡ ನಾಗರ ಹಾವು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.









