ಕೃಷಿ ಮತ್ತು ಗ್ರಾಮೀಣ ಮಹಿಳಾ ಗೃಹ ಉದ್ಯಮದ ಮಾಹಿತಿ ಕಾರ್ಯಾಗಾರ

ಶೇರ್ ಮಾಡಿ

ನೇಸರ ಫೆ.18: ಜೇಸಿಐ ಉಪ್ಪಿನಂಗಡಿ ಘಟಕದ ಉಪಾಧ್ಯಕ್ಷರಾದ ಜೇಸಿ.ಅವನೀಶ್.ಪಿ ಇವರ ಸ್ವಗೃಹ ಶ್ರೀ ಕೃಷ್ಣ ಸದನ ಪೆರಿಯಡ್ಕದಲ್ಲಿ ಬದುಕಿಗೆ ಪ್ರೇರಣೆ ಕೊಡುವ,ಸ್ವಾವಲಂಬಿ ಕುಟುಂಬದ ಪರಿಚಯದೊಂದಿಗೆ ಕಾರ್ಯಕ್ರಮ ನಡೆಯಿತು.ಶ್ರೀ ಮಂಜುನಾಥ ಭಟ್ ದಂಪತಿಗಳ ನೇತೃತ್ವದಲ್ಲಿ ನೈಸರ್ಗಿಕ ಕೃಷಿ ಬದುಕು ಮತ್ತು ಅವರು ಸ್ಥಾಪಿಸಿದ ಶ್ರೀ ದುರ್ಗಾ ಮಹಿಳಾ ಗೃಹ ಉದ್ಯಮದ ವಿವಿಧ ಆರೋಗ್ಯ ವರ್ಧಿಸುವ ಉತ್ಪನ್ನಗಳು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಬಹು ಬೇಡಿಕೆಯ ವಸ್ತುಗಳ ಪ್ರಾತ್ಯಕ್ಷಿಕೆ,ತೆಂಗು,ಅಡಿಕೆ,ಮಳೆ ನೀರು ಕೊಯ್ಲು ವಿಧಾನ, ದೇಶಿ ಹಸುಗಳ ಸಾಕಣೆ,50 ಮಿಕ್ಕಿ ವಿವಿಧ ಹಣ್ಣಿನ ಗಿಡಗಳ ತೋಟ, ವಿವಿಧ ಗೃಹ ತಿಂಡಿಗಳ ತಯಾರಿಕೆ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.

ಮನೆಮನೆ ಯಕ್ಷಗಾನ ವೀಕ್ಷಿಸಿ, Subscribers ಮಾಡಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಮೋಹನ್ ಚಂದ್ರ ತೋಟದ ಮನೆ ವಹಿಸಿದ್ದರು.ಘಟಕದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಜೇಸಿ.ಅವನೀಶ್.ಪಿ, ಪೂರ್ವಾಧಕ್ಷರಾದ ಜೇಸಿ.ಕೆ.ವಿ.ಕುಲಾಲ್,ಕಾರ್ಯದರ್ಶಿ ಜೇಸಿ.ಲವಿನಾ ಪಿಂಟೊ, ಕೋಶಾಧಿಕಾರಿ ಸುರೇಶ್,ಮಾರ್ಗದರ್ಶಿ ಪೂರ್ವಾಧಕ್ಷರಾದ ಪ್ರಶಾಂತ್ ಕುಮಾರ್.ರೈ ಉಪಸ್ಥಿತರಿದ್ದರು.

 

—ಜಾಹೀರಾತು—

 

Leave a Reply

error: Content is protected !!