ನೆಲ್ಯಾಡಿ: ಪೋಷಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿ, ಶಿಕ್ಷಕರು ಒಂದು ಶಿಕ್ಷಣ ಸಂಸ್ಥೆ ಉತ್ತಮಗೊಳ್ಳಲು ಇವರುವ ನಾಲ್ಕು ಪಿಲ್ಲರ್ ಗಳು. ವಿದ್ಯಾರ್ಥಿಗಳು ಕಷ್ಟ ಬಂದಾಗಲೇ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ಏನಾದರೂ ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳು ಓದುವುದರಿಂದ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಹೋಗಲು ಸಾಧ್ಯ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಹೇಳಿದರು.
ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಜಾರ್ಜಿಯನ್ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟನೆಯನ್ನು ಜೂ.29 ರಂದು ನೆರವೇರಿಸಿ ಮಾತನಾಡಿದರು.
1978 ಜೂನ್ 1ರಂದು ಪೋಳಿಕಾರ್ಪಸ್ ಮೋರ್ ಗೀವರ್ಗೀಸ್ ಅವರ ನೇತೃತ್ವದಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆ. ಇತಿಹಾಸ ಇರುವ ಈ ಶಿಕ್ಷಣ ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸುವ ಕನಸು ಹಲವು ವರ್ಷಗಳ ಹಿಂದೆ ಇತ್ತು. ಇದೀಗ ಕೈಗೂಡಿ ಬಂದಿದೆ. ಅನುಭವಿ ಶಿಕ್ಷಕರು ಹಾಗೂ ಕಲಿಕಾ ವಾತಾವರಣದೊಂದಿಗೆ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲಾಗಿದೆ ಎಂದು ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಹೇಳಿದರು.
ವೇದಿಕೆಯಲ್ಲಿ ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಉಪಾಧ್ಯಕ್ಷ ವಂ.ರೆ.ಪಿ.ಕೆ ಅಬ್ರಹಾಂ ಕೋರ್ ಎಪಿಸ್ಕೋಪಾ, ಕಕ್ಕಿಂಜೆ ಸೈಂಟ್ ಮೇರೀಸ್ ಚಾಕೋಬೈಟ್ ಸಿರಿಯನ್ ಚರ್ಚ್ ನ ವಿಕಾರ್ ವೆ.ರೆ. ಕುರಿಯಾಕೋಸ್ ಕವಣಾಟೇಲ್ ಕೋರ್ ಎಪಿಸ್ಕೋಪಾ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಕೊಣಾಲು ಚರ್ಚ್ ನ ಧರ್ಮಗುರುಗಳಾದ ಅನಿಲ್ ಪಾರಿಚ್ಚೇರಿ, ಸಂಸ್ಥೆಯ ಸಂಚಾಲಕ ನೋಮಿಸ್ ಕುರಿಯಕೋಸ್ ಉಪಸ್ಥಿತರಿದ್ದರು.
ಆಂಗ್ಲ ಮಾಧ್ಯಮದ ಮುಖ್ಯಶಿಕ್ಷಕ ಹರಿಪ್ರಸಾದ್.ಕೆ ಸ್ವಾಗತಿಸಿದರು. ಕನ್ನಡ ಮಾಧ್ಯಮದ ಮುಖ್ಯಶಿಕ್ಷಕ ತೋಮಸ್ ಎಂ.ವೈ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ನಿರೂಪಿಸಿದರು.