ನೆಲ್ಯಾಡಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ) ಕಡಬ ತಾಲೂಕು ನೆಲ್ಯಾಡಿ ವಲಯದ ವತಿಯಿಂದ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಶಿರಾಡಿಯಲ್ಲಿ, ಪರಿಸರ ಜಾಗೃತಿ ಮತ್ತು ಗಿಡ ನಾಟಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅರಣ್ಯ ರಕ್ಷಕ ನಿಂಗಪ್ಪ ಅವರು ಮಾತಾಡಿ ಪರಿಸರ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕೆಂದರು. ನೆಲ್ಯಾಡಿ ವಲಯ ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಮಾತಾಡಿ ನಾವು ಪರಿಸರವನ್ನೂ ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವ ಕಾರ್ಯವಾಗಬೇಕೆಂದರು.
ಅಧ್ಯಕ್ಷತೆಯನ್ನು ಶಿರಾಡಿ ಒಕ್ಕೂಟದ ಅಧ್ಯಕ್ಷ ಸುಕುಮಾರ್ ವಹಿಸಿದರು. ಕಾರ್ಯಕ್ರಮದಲ್ಲಿ ಅರಣ್ಯ ರಕ್ಷಕ ಚಂದ್ರು, ಅರಣ್ಯ ವೀಕ್ಷಕ ಸತೀಶ್, ಕೃಷಿ ಮೇಲ್ವಿಚಾರಕ ಸೋಮೇಶ್, ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿ ಪ್ರಿಯ, ಸಂದ್ಯಾ ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕ ವಿಜೇಶ್ ಜೈನ್ ಪ್ರಸ್ತಾವಿಕವಾಗಿ ಮಾತಾಡಿದರು, ಒಕ್ಕೂಟದ ಪದಾಧಿಕಾರಿ ಗ್ರೇಸಿ ಚಾಕೋಚನ್ ಸ್ವಾಗತಿಸಿದರು. ಪದಾಧಿಕಾರಿ ಮಿನಿ ವಂದಿಸಿದರು. ಶಿರಾಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಕಾರ್ಯಕ್ರಮ ನಿರೂಪಿಸಿದರು.