ಕೊಕ್ಕಡ: ಶಿಬಾಜೆ ಗ್ರಾಮದ ಬರ್ಗುಳ ಎಂಬಲ್ಲಿ ಗುರುವಾರ ಸಂಜೆ ವಿದ್ಯುತ್ ಕಂಬದ ಒಂದು ತಂತಿ ತುಂಡಾಗಿ, ಕಂಬಕ್ಕೆ ವಿದ್ಯುತ್ ಸ್ಪರ್ಶಿಸಿ ನಡೆದುಕೊಂಡು ಹೋಗುತ್ತಿದ್ದ ಪ್ರತೀಕ್ಷಾ ಶೆಟ್ಟಿಗೆ ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಘಟನೆಗೆ ಕಾರಣವಾದ ವಿದ್ಯುತ್ ಕಂಬವನ್ನು ಮೆಸ್ಕಾಂ ಇಲಾಖೆ ಜೂ.28ರಂದು ಸ್ಥಳಾಂತರಿಸಿದೆ.
ಪ್ರತೀಕ್ಷಾ, ಸಾವಿಗೀಡಾಗುವ ಮೊದಲು ಆನ್‌ಲೈನ್ ಡೆಲಿವರಿಗೆ ಬಂದಿದ್ದ ಯುವಕ ತೋಡಿನಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ರಸ್ತೆಯಲ್ಲಿ ನಿಂತಿದ್ದ ಮನೆಗೆ ಬರುತ್ತಿದ್ದರೆ ಆತನಿಗೆ ವಿದ್ಯುತ್ ಆಘಾತವಾಗುವ ಸಾಧ್ಯತೆ ಇತ್ತು. ಈ ವೇಳೆ ಪ್ರತೀಕ್ಷಾರನ್ನು ರಕ್ಷಿಸಿಸಲು ಹೋದ ತಂದೆ ಗಣೇಶ್ ಶೆಟ್ಟಿಗೂ ವಿದ್ಯುತ್ ಸ್ಪರ್ಶಿಸಿದೆ.
ಧರ್ಮಸ್ಥಳ ಸಬ್ ಸ್ಟೇಶನ್‌ನಿಂದ ಶಿಶಿಲ ವಿದ್ಯುತ್ ಪರಿವರ್ತಕಗಳಿಗೆ ಸಾಗುವ ಈ ಎಚ್.ಟಿ. ಮತ್ತು ಎಲ್. ಟಿ. ಲೈನ್ ಬಹಳಷ್ಟು ಅಪಾಯಕಾರಿಯಾಗಿದೆ. ಇದರ ನಿರ್ವಹಣೆಯೆಡೆಗೆ ಮೆಸ್ಕಾಂ ಇಲಾಖೆ ಒತ್ತು ನೀಡುತ್ತಿದ್ದರೆ ಪ್ರತೀಕ್ಷಾ ಬದುಕುಳಿಯುತ್ತಿದ್ದಳು. ಇದೇ ಮಾರ್ಗವಾಗಿ ಇನ್ನಷ್ಟು ಅಪಾಯಕಾರಿ ವಿದ್ಯುತ್ ಕಂಬಗಳಿದ್ದು ಅವುಗಳನ್ನೂ ಆದಷ್ಟು ಬೇಗ ಸ್ಥಳಾಂತರಿಸುವಂತೆ ಹಾಗೂ ಸೂಕ್ತ ನಿರ್ವಹಣೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.