ಕಡಬ: ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯ ರಕ್ಷಕ -ಶಿಕ್ಷಕ ಸಮಿತಿಯ ಮೊದಲ ಸಭೆಯು ಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು.
ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ವಂ.ಸ್ವಾಮಿ ಪೌಲ್ ಪ್ರಕಾಶ್ ಡಿ’ಸೋಜಾ ಅವರು ಕಳೆದ ಶೈಕ್ಷಣಿಕ ವರ್ಷದಲ್ಲಿ ಆಯ್ಕೆಗೊಂಡ ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳ ಸೇವೆಯನ್ನು ಹಾಗೂ ಸಲಹಾ ಸೂಚನೆಗಳನ್ನು ಸ್ಮರಿಸಿದರು. ಶಾಲಾ ಅವಧಿಯಲ್ಲಿ ಮಕ್ಕಳ ಕಲಿಕೆಯ ಬಗ್ಗೆ ಪೋಷಕರ ಸಹಕಾರ ಹಾಗೂ ಶಿಕ್ಷಣದಲ್ಲಿ ಮಕ್ಕಳ ಪ್ರಗತಿಗೆ ಹೆಚ್ಚಿನ ಪ್ರೋತ್ಸಾಹ ಅತ್ಯಗತ್ಯ ಎಂದು ಮಾತನಾಡಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಲಾಯಿತು.
ರಕ್ಷಕ ಶಿಕ್ಷಕ ಸಂಘದಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಪ್ರೌಢಶಾಲಾ ಮತ್ತು ಕಾಲೇಜು ವಿಭಾಗದ ಉಪಾಧ್ಯಕ್ಷರುಗಳಾದ ಬಾಲಕೃಷ್ಣ ಬೊಳ್ಳಾಜೆ ಮತ್ತು ಸತೀಶ್ ನ್ಯಾಕ್ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಪದಾಧಿಕಾರಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಶ್ರೀಲತಾ ಶಾಲಾ ನಿಯಮಾವಳಿಗಳನ್ನು ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಕ್ಷಕ ಶಿಕ್ಷಕ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ಬಾಲಕೃಷ್ಣ ಬೊಳ್ಳಾಜೆ ಹಾಗೂ ಪ್ರಸ್ತುತ ವರ್ಷದ ಉಪಾಧ್ಯಕ್ಷ ವಾಚಣ್ಣ ಕೆರೆಮೂಲೆ ಹಾಗೂ ಶಿಕ್ಷಕ ವೃಂದದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ರಕ್ಷಕ ಸಂಘದ ನೂತನ ಪದಾಧಿಕಾರಿಗಳಾಗಿ ಪ್ರಕಾಶ್ ಡಿ’ಸೋಜಾ, ಸುಮಿತ್ರ, ಅಬ್ದುಲ್ ಹಸೀಬ್, ರಮ್ಯ ಆಯಿಷ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಸುರಕ್ಷಾ ಸಮಿತಿಯ ಪದಾಧಿಕಾರಿಗಳಾಗಿ ಜಯಶ್ರೀ ಹಾಗೂ ಅಬ್ದುಲ್ ಹಸೀಸ್ ಆಯ್ಕೆಗೊಂಡರು.
ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ನಡೆಸಿಕೊಟ್ಟರು. ಸಹ ಶಿಕ್ಷಕಿ ಏಲಿಕುಟ್ಟಿ ಸ್ವಾಗತಿಸಿದರು, ರಕ್ಷಕ ಶಿಕ್ಷಕ ಸಮಿತಿಯ ಸಂಯೋಜಕ ವಿನುತಾ ವಂದಿಸಿದರು. ಸಹ ಶಿಕ್ಷಕಿ ಪೂರ್ಣಿಮಾ.ಪಿ ಕಾರ್ಯಕ್ರಮ ನಿರೂಪಿಸಿದರು.