ನೆಲ್ಯಾಡಿ: ನೂಜಿಬಾಳ್ತಿಲ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಓದುವ ಸಪ್ತಾಹ ಕಾರ್ಯಕ್ರಮ

ಶೇರ್ ಮಾಡಿ

ನೆಲ್ಯಾಡಿ: ನೂಜಿಬಾಳ್ತಿಲ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಸಲುವಾಗಿ ಜುಲೈ 2ರಂದು ಪ್ರಾರಂಭ ಆಗಿ ಜುಲೈ 8ರವರೆಗೆ ಓದುವ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

ಸಂಸ್ಥೆಯ ನಿರ್ದೇಶಕರಾದ ಫಾ.ವಿಜೋಯ್ ವರ್ಗೀಸ್, ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಪುಸ್ತಕ ಓದುವುದರಲ್ಲಿ ತಲ್ಲಿನರಾಗಬೇಕೆಂದು, ಮೊಬೈಲ್ ಉಪಯೋಗವನ್ನು ಕಡಿಮೆ ಮಾಡಬೇಕೆಂದು ಪ್ರೇರೇಪಿಸಿದರು. ಜ್ಞಾನಕ್ಕಾಗಿ ಓದಬೇಕು , ಮನರಂಜನೆಗಾಗಿ ಓದಬೇಕು, ಶಬ್ದ ಭಂಡಾರಕ್ಕೆ ಬೇಕಾಗಿ ಓದಬೇಕು. ಪುಸ್ತಕಗಳನ್ನು ಓದಿ ಅದರ ಸಾರಾಂಶವನ್ನು ಬರೆದಿಟ್ಟುಕೊಳ್ಳಬೇಕೆಂದು ನೆನಪಿಸಿದರು.

ಪ್ರೌಢಶಾಲಾ ಮುಖ್ಯಗುರು ತೋಮಸ್ ಏ.ಕೆ ಮಾತನಾಡಿ ವಿದ್ಯಾರ್ಥಿಗಳು ಹುಟ್ಟುಹಬ್ಬವನ್ನು ಆಚರಿಸುವಾಗ ಸಿಹಿ ತಿಂಡಿಗಳನ್ನು ವಿತರಿಸದೆ ಅದಕ್ಕೆ ಬದಲಾಗಿ ಒಂದು ಪುಸ್ತಕವನ್ನು ಶಾಲೆಯ ಗ್ರಂಥಾಲಯಕ್ಕೆ ಕೊಡುಗೆಯಾಗಿ ಕೊಡಬೇಕೆಂದು ವಿನಂತಿಸಿದರು.

ಸಮಾರೋಪದ ದಿನ ವಿವಿಧ ಸ್ಪರ್ಧೆಗಳನ್ನು ನಡೆಸುವುದಾಗಿ ಮಾಹಿತಿ ಕೊಟ್ಟರು. ಉಪನ್ಯಾಸಕರಾದ ಶಾಂಭವಿ ಮತ್ತು ಜಿನಿ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಓದುವ ಮನಸ್ಸು ಎಂಬ ಕಿರು ನಾಟಕವನ್ನು ಪ್ರದರ್ಶಿಸಿದರು.

ಆಯಿಷತ್ ಶಿಬಿಲ ಕಾರ್ಯಕ್ರಮ ನಿರೂಪಿಸಿದರು, ದೀಪ್ತಿ ವಂದಿಸಿದರು.

Leave a Reply

error: Content is protected !!