ಬೆಳ್ಳಾರೆ ಕಲಾಮಂದಿರ್ ಡಾನ್ಸ್ ಕ್ರಿವ್ ಅವರ ನೃತ್ಯ ತರಗತಿ ಪಂಜದಲ್ಲಿ ಪ್ರಾರಂಭ

ಶೇರ್ ಮಾಡಿ

ಪಂಜ: ಕಲಾ ಮಂದಿರ್ ಡಾನ್ಸ್ ಕ್ರಿವ್ ಬೆಳ್ಳಾರೆ ಇದರ ವತಿಯಿಂದ ಪಂಜ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನೃತ್ಯ ತರಗತಿಗಳನ್ನು ಉದ್ಘಾಟಿಸಿದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಇವರು “ಮಾನಸಿಕ ಮತ್ತು ಶಾರೀರಿಕ ಆರೋಗ್ಯಕ್ಕೆ ಪೂರಕವಾದ ನೃತ್ಯ ತರಬೇತಿ ತರಗತಿಯಿಂದ ಮಕ್ಕಳಿಗೆ ಪ್ರಯೋಜನವಾಗಲಿ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ನೃತ್ಯ ತರಬೇತಿ ಪಡೆದ ನಮ್ಮೂರಿನ ಮಕ್ಕಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಹಾರೈಸಿದರು.

ಪಂಜ ಶ್ರೀ ಶಾರದಾಂಬ ಭಜನಾ ಮಂದಿರದ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷ ಜೇಸಿ ಜೀವನ್ ಮಲ್ಕಜೆ, ವನಿತಾ ಸಮಾಜ ಪಂಜ ಇದರ ಗೌರವಾಧ್ಯಕ್ಷ ಪುಷ್ಪಾ.ಡಿ ಕಾನತ್ತೂರು ಹಾಗೂ ಕಲಾ ಮಂದಿರ್ ಬೆಳ್ಳಾರೆ ಸಂಸ್ಥೆಯ ನೃತ್ಯ ನಿರ್ದೇಶಕ ಪ್ರಮೋದ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಲಾಮಂದಿರ್ ಡಾನ್ಸ್ ಕ್ರಿವ್ ಬೆಳ್ಳಾರೆ ಸಂಸ್ಥೆಯ ನಿರ್ದೇಶಕರುಗಳಾದ ಅಶೋಕ್ ಬಸ್ತಿಗುಡ್ಡೆ, ಸತೀಶ್ ಪಂಜ ಹಾಗೂ ನೃತ್ಯ ಶಿಕ್ಷಕಿಯರಾದ ಭಾಗ್ಯಶ್ರೀ, ನಿಶ್ಮಿತಾ, ವಿಕ್ಯ, ಯಕ್ಷಿತ್ ಉಪಸ್ಥಿತರಿದ್ದರು

ನಿರ್ದೇಶಕ ಪ್ರಮೋದ್ ರೈ ಸ್ವಾಗತಿಸಿದರು, ಸತೀಶ್ ಪಂಜ ವಂದಿಸಿದರು, ಜೇಸಿ ಸೋಮಶೇಖರ ನೇರಳ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡಿದರು.

Leave a Reply

error: Content is protected !!