ಕೊಕ್ಕಡ ಅಮೃತ ಗ್ರಾ.ಪಂ.ನಿಂದ ಫಲಾನುಭವಿಗಳಿಗೆ ನೀರಿನ ಡ್ರಮ್ ಗಳ ವಿತರಣೆ ಶಾಸಕರಿಂದ

ಶೇರ್ ಮಾಡಿ

ಕೊಕ್ಕಡ: ಕೊಕ್ಕಡ ಅಮೃತ ಗ್ರಾಮ ಪಂಚಾಯಿತಿ ನಿಂದ ಸ್ವಂತ ನಿಧಿಯ 25% ಅನುದಾನದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 105 ಮಂದಿಗೆ ನೀರಿನ ಡ್ರಮ್ ವಿತರಣಾ ಕಾರ್ಯಕ್ರಮ ಕೊಕ್ಕಡದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜಾ ನೆರವೇರಿಸಿ ಪಲಾನುಭವಿಗಳಿಗೆ ಡ್ರಮ್ ವಿತರಿಸಿ ಮಾತನಾಡಿದ ಅವರು ಅಂಬೇಡ್ಕರ್ ಅವರು ಸಂವಿಧಾನ ರಚನೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಪೂರಕವಾಗುವಂತೆ ಮಾಡಿದ್ದಾರೆ. ಪಂಚಾಯಿತಿಯಿಂದ ಹಿಡಿದು ಲೋಕಸಭೆವರೆಗೆ ಈ ಪಂಗಡದ ಜನಗಳಿಗೆ ಅನುಕೂಲಕರವಾಗುವ ರೀತಿಯಲ್ಲಿ ಕೆಲಸವನ್ನು ಮಾಡಲಾಗುತ್ತಿದೆ. ಇವರ ಅಭಿವೃದ್ಧಿಗೆ ಮೀಸಲಿಟ್ಟ 21ಸಾವಿರ ಕೋಟಿ ರೂ ವರೆಗಿನ ಅನುದಾನವನ್ನು ಕಾಂಗ್ರೆಸ್ ಸರಕಾರ ಕಡಿತ ಮಾಡಿದೆ. ಇವರು ಸಬಲೀಕರಣರಾಗಬೇಕೆಂಬ ಉದ್ದೇಶದಿಂದ ಪಂಚಾಯತಿನ ಅನುದಾನಗಳ ಮೂಲಕ ತಳಮಟ್ಟದಿಂದಲೇ ಸಹಾಯ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಮಾತನಾಡಿ ಕೊಕ್ಕಡ ಗ್ರಾಮ ಪಂಚಾಯತಿ ಎಲ್ಲರ ಸಹಕಾರದಿಂದ ಉತ್ತಮವಾದ ಕೆಲಸವನ್ನು ಮಾಡುತ್ತಿದೆ. ಶಾಸಕ ಹರೀಶ್ ಪೂಂಜಾ ಅವರು ಅತಿ ಹೆಚ್ಚಿನ ಅನುದಾನಗಳನ್ನು ಈ ಪಂಚಾಯಿತಿಗೆ ನೀಡಿದ್ದಾರೆ ಎಂದರು.

ಗ್ರಾ.ಪಂ.ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಪ್ರಭಾಕರ್ ಗೌಡ, ನಿಕಟ ಪೂರ್ವ ಅಧ್ಯಕ್ಷ ಯೋಗೀಶ್ ಆಲಂಬಿಲ, ಎಸ್.ಟಿ ಮೋರ್ಚಾದ ತಾಲೂಕು ಪ್ರಧಾನ ಕಾರ್ಯದರ್ಶಿ ವಿಠಲ್ ಕುರ್ಲೆ, ವೈದ್ಯನಾಥೇಶ್ವರ ದೇವಸ್ಥಾನದ ಮಾಜಿ ಟ್ರಸ್ಟಿ ಗಿರೀಶ್ ಮಹಾವೀರ ಕಾಲೋನಿ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಹಾಗೂ ಗ್ರಾಮ ಪಂಚಾಯಿತಿನ ಸದಸ್ಯರು ಉಪಸ್ಥಿತರಿದ್ದರು.

ಯೋಗೀಶ್ ಆಲಂಬಿಲ ಸ್ವಾಗತಿಸಿದರು, ಕೇಶವ ಕೊಕ್ಕಡ ನಿರೂಪಿಸಿದರು, ದೀಪಕ್ ರಾಜ್ ವಂದಿಸಿದರು

Leave a Reply

error: Content is protected !!