ನೆಲ್ಯಾಡಿ ಜೇಸಿಐ ವತಿಯಿಂದ LAV (Lo assistance Vist) ಕಾರ್ಯಕ್ರಮ

ಶೇರ್ ಮಾಡಿ

ನೆಲ್ಯಾಡಿ: ಜೇಸಿಐ ವತಿಯಿಂದ LAV (Lo assistance Vist) ಕಾರ್ಯಕ್ರಮ ಜುಲೈ.10ರಂದು ನೆಲ್ಯಾಡಿ ಐ ಐ ಸಿ ಟಿ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು.

ತರಬೇತಿದಾರರಾಗಿ ಜೇಸಿಐ ನ ವಲಯ ಉಪಾಧ್ಯಕ್ಷ ಜೆ ಎಫ್ ಎಮ್ ಶಂಕರ್ ರಾವ್.ಬಿ ಆಗಮಿಸಿ ವಲಯದಲ್ಲಿ ಮುಂದೆ ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ, ಘಟಕಾಧ್ಯಕ್ಷರು ಮುಂದಿನ ದಿನಗಳಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಹಾಗೂ ನೆಲ್ಯಾಡಿ ಘಟಕದವರು ಮಾಡಿದ ಕಾರ್ಯಕ್ರಮಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಜೇಸಿಐ ನ ಸುಚಿತ್ರ ಬಂಟ್ರಿಯಾಲ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ, ವಲಯಾಧಿಕಾರಿ ದಯಾಕರ ರೈ, ಕಾರ್ಯದರ್ಶಿ ಆನಂದ ಅಜಿಲ, ಜೇಸಿಐ ನ ಪದಾಧಿಕಾರಿಗಳು ಹಾಗೂ ಸದಸ್ಯರು, ನೆಲ್ಯಾಡಿ ಸೀನಿಯರ್ ಚೇಂಬರ್ ಅಧ್ಯಕ್ಷರಾದ ಶೀನಪ್ಪ ಉಪಸ್ಥಿತರಿದ್ದರು.
ಕಾರ್ಯದರ್ಶಿ ಆನಂದ ಅಜಿಲ ವಂದಿಸಿದರು.


Leave a Reply

error: Content is protected !!