ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕದಿಂದ ಪಟ್ಟೂರಿಗೆ ಹೋಗುವ ರಸ್ತೆಯ ಬಳಿ ನೀರು ಹರಿವ ಮೋರಿಯಲ್ಲಿ ಸತ್ತ ದನದ ಕರುವೊಂದನ್ನು ಎಸೆದು ಹೋಗಿರುವ ಘಟನೆ ಜು.15ರಂದು ಬೆಳಕಿಗೆ ಬಂದಿದೆ.
ಕೊಕ್ಕಡ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಅವರು ಮಾಹಿತಿ ನೀಡಿದ ಪ್ರಕಾರ ಕೊಕ್ಕಡದ ಹಿಂದೂ ಜಾಗರಣ ವೇದಿಕೆ, ಶಿವಾಜಿ ಗ್ರೂಪ್ ಆಫ್ ಬಾಯ್ಸ್ ತಂಡದ ಸದಸ್ಯರು ದನದ ಕರುವನ್ನು ಮೋರಿಯಿಂದ ಹೊರತೆಗೆದು ಅಲ್ಲೇ ಸಮೀಪ ಅಂತ್ಯಸಂಸ್ಕಾರ ನೆರವೇರಿಸಿದರು.
ಕರು ಸತ್ತು ಮೂರು ದಿನಗಳಾಗಿರಬಹುದು ಎಂದು ಹೇಳಲಾಗುತ್ತಿದ್ದು, ಕರು ಆಕಸ್ಮಿಕವಾಗಿ ಸತ್ತಿಲ್ಲ, ಉದ್ದೇಶಪೂರಿತವಾಗಿಯೇ ಸತ್ತ ದನದ ಕರುವನ್ನು ಕಿಡಿಗೇಡಿಗಳು ಎಸೆದಿರುವ ಬಗ್ಗೆ ಸಂಕೆ ವ್ಯಕ್ತವಾಗಿದೆ ಸಾರ್ವಜನಿಕರಲ್ಲಿ. ಮೋರಿಯ ಸಮೀಪ ಗಾಡಿಯೊಂದು ನಿಂತ ಕುರುಹುಗಳು ಕಂಡುಬಂದಿದ್ದು.
ಈ ಭಾಗದಲ್ಲಿ ದನಗಳ ಕಳವು ಆಗಾಗ ನಡೆಯುತ್ತಿದ್ದು, ಕರು ಸತ್ತು ಬಿದ್ದಿದ್ದ ಪ್ರದೇಶಕ್ಕೆ ಸಮೀಪದಲ್ಲೇ ಅಕ್ರಮ ಕಸಾಯಿಖಾನೆಯೊಂದಿದ್ದು, ಅಲ್ಲಿಗೆ ತಂದಿರುವ ಕರು ಸತ್ತಿರುವ ಕಾರಣ ಮೋರಿಯಲ್ಲಿ ಬಿಸಾಡಿರಬಹುದೇ ಎಂದು ಚರ್ಚೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.