ನೆಲ್ಯಾಡಿ: ಶಿವಳ್ಳಿ ಸಂಪದ ನೆಲ್ಯಾಡಿ ವಲಯದ ಆಟಿಡೊಂಜಿ ದಿನ ಕಾರ್ಯಕ್ರಮ ದುರ್ಗಾಶ್ರೀ ಸತೀಶ್ ಮೊಡಂಬಡಿತ್ತಾಯರ ವಾಣಿಶ್ರೀ ಮನೆಯಲ್ಲಿ ಜುಲೈ 21ರಂದು ನಡೆಯಿತು.
ಪಿ ಯು ಸಿ ಮತ್ತು ಪದವಿ ತರಗತಿಗಳ ಅಂತಿಮ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ ತೋರಿದ ಹರ್ಷಿತಾ, ಭೂಮಿಕಾ, ನಿತ್ಯಶ್ರೀ, ಅನಂತೇಶ್, ಅಭಿರಾಮ್ ಇವರನ್ನು ಅಭಿನಂದಿಸಲಾಯಿತು. ಧಾರ್ಮಿಕ ಕ್ಷೇತ್ರದಲ್ಲಿ ಆಸುಪಾಸಿನ ದೇವಾಲಯಗಳ ಅಭಿವೃದ್ದಿಗಾಗಿ ವಿಶೇಷ ಸಾಧನೆಗೈದ ಮುಕ್ತೇಸರುಗಳಾದ ಮಾಧವ ಸರಳಾಯ, ಡಾ.ಸುಬ್ರಮಣ್ಯ ಶಬರಾಯ, ಸೂರ್ಯನಾರಾಯಣ ಜೋಗಿತ್ತಾಯ, ಸುಬ್ರಹ್ಮಣ್ಯ ಬಾಳ್ತಿಲ್ಲಾಯರುಗಳನ್ನು ಸನ್ಮಾನಿಸಲಾಯಿತು.
ಶಿವಳ್ಳಿ ಬಾಂಧವರು ಪ್ರಮುಖವಾಗಿ ಮಹಿಳೆಯರು ಮನೆಯಲ್ಲಿಯೇ ತಯಾರಿಸಿ ತಂದ ಆಟಿಯ ವಿಶೇಷ ಹೊಸ ರುಚಿ ತಿನಿಸುಗಳನ್ನು ಹಂಚಿಕೊಂಡು ಸವಿದು ಸಂಭ್ರಮಿಸಲಾಯಿತು. ಪುತ್ತೂರು-ಕಡಬ ತಾಲೂಕು ಶಿವಳ್ಳಿ ಸಂಪದದ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ, ನಿಕಟಪೂರ್ವ ಅಧ್ಯಕ್ಷ ದಿವಾಕರ ನಿಡ್ವಣ್ಣಾಯ, ವಲಯ ಉಸ್ತುವಾರಿ ಗುರುಪ್ರಸಾದ್ ರಾಮಕುಂಜ, ತಾಲೂಕು ಉಪಾಧ್ಯಕ್ಷ ಸತೀಶ್ ಮುಡಂಬಡಿತ್ತಾಯ, ಶ್ರೀಧರ ಗೋರೆ ಮುಂತಾದ 60 ಕ್ಕಿಂತಲೂ ಮಿಕ್ಕಿ ಊರ ಗಣ್ಯರು ಉಪಸ್ಥಿತರಿದ್ದರು.
ನೆಲ್ಯಾಡಿ ವಲಯದ ಅಧ್ಯಕ್ಷ ರಾಜೇಶ್ ರಾವ್ ಸ್ವಾಗತಿಸಿ, ವೆಂಕಟ್ರಮಣ ಕಕ್ಕಿಲ್ಲಾಯರು ವಂದಿಸಿದರು. ರವೀಂದ್ರ ಪರ್ಲತ್ತಾಯರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಅಖಿಲಾ ಪಡುಬೆಟ್ಟು ಪ್ರಾರ್ಥಿಸಿ, ಧನಲಕ್ಷ್ಮಿ ಬಾಳ್ತಿಲ್ಲಾಯ ನೀತಿ ಸಂಹಿತೆ ಪಠಿಸಿದರು. ಶಾರದಾ ಮುಡಂಬಡಿತ್ತಾಯ, ವಿಜಯಲಕ್ಷ್ಮಿ ಮುಡಂಬಡಿತ್ತಾಯ, ಪ್ರೇಮ ರಾವ್, ಶ್ರೇಯಸ್.ಕೆ.ಎಸ್ ಕಾರ್ಯಕ್ರಮದ ಆಥಿತ್ಯ ಸಂಯೋಜಿಸಿದರು.