
ನೆಲ್ಯಾಡಿ ಸಮೀಪದ ಕಟ್ಟೆಮಜಲು ನಾರಾಯಣ ಶೆಟ್ಟಿ ಅವರ ಮನೆಯ ಸಮೀಪ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿ ಜನರಲ್ಲಿ ಭಯ ಭೀತಿ ಉಂಟಾದ ಘಟನೆ ಜು.24ರಂದು ಸಂಜೆ ನಡೆದಿದೆ.
ಸುಮಾರು 12ಫೀಟ್ ಗಿಂತಲೂ ಉದ್ದದ ಕಾಳಿಂಗ ಇದಾಗಿದ್ದು ಗೋಳಿತಟ್ಟು ಉರಗತಜ್ಞ ಎಚ್.ಆರ್ ಹೈದರ್ ಅವರು ಕಾಳಿಂಗ ಸರ್ಪ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಿನೇಶ್, ಕೌಕ್ರಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಲೋಕೇಶ್ ಬಾಣಜಾಲು, ಕೃಷ್ಣಪ್ಪ ಕಟ್ಟೆಮಜಲು ಸಹಕರಿಸಿದರು







