
ರಾಕಿಂಗ್ ಸ್ಟಾರ್ ಯಶ್ ಅವರು ಕುಟುಂಬ ಸಮೇತರಾಗಿ ಮಂಗಳವಾರ ಬೆಳ್ತಂಗಡಿ ತಾಲೂಕಿನಲ್ಲಿರುವ ಮಣ್ಣಿನ ಹರಕೆಯಿಂದ ಪ್ರಸಿದ್ಧಿ ಪಡೆದಿರುವ ಸುರ್ಯ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ನೀಡಿದರು.
ಸಿನೆಮಾದ ಸಕ್ಸಸ್ ಗಾಗಿ ಈ ಹಿಂದೆ ಭೇಟಿ ನೀಡಿದ್ದ ಅವರು ಪತ್ನಿ ರಾಧಿಕಾ ಪಂಡಿತ್, ಮಕ್ಕಳೊಂದಿಗೆ ಬಂದು ದೇವರಿಗೆ ಕುಟುಂಬ ಹಾಗೂ ಸಿನೆಮಾ ರೀಲ್ ನ ಮಣ್ಣಿನ ಹರಕೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಸುರ್ಯ ಗುತ್ತು ಡಾ.ಸತೀಶ್ಚಂದ್ರ ಎಸ್. ಅವರು ದಂಪತಿಗಳನ್ನು ಕ್ಷೇತ್ರದ ವತಿಯಿಂದ ಗೌರವಿಸಿದರು.
ಪತ್ನಿ ರಾಧಿಕಾ ಪಂಡಿತ್. ಮಕ್ಕಳಾದ ಐರಾ ಹಾಗೂ ಯಥರ್ವ್ ಇದ್ದರು. ಚಲನಚಿತ್ರ ನಿರ್ಮಾಪಕ ವೆಂಕಟ್ ಜತೆಗಿದ್ದರು.






