ಕಡಬ: ಕಳ್ಳರ ಕೈಚಳಕ ಮರ್ದಾಳ ಪರಿಸರದಲ್ಲಿ

ಶೇರ್ ಮಾಡಿ

ನೇಸರ ಫೆ.22: ಕಡಬ ಪರಿಸರದ ಮರ್ದಾಳಲ್ಲಿ ಕಳ್ಳರು ತಮ್ಮ‌ ಕೈಚಳಕವನ್ನು ತೋರಿಸಿದ್ದಾರೆ. ಬಂಟ್ರ ಗ್ರಾಮದ ಚಾಕೋಟೆಕೆರೆ ನಿವಾಸಿ ಅಶ್ರಫ್ ಎಂಬವರ ಮನೆಯ ಹಿಂಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಮನೆಯಿಡೀ ಜಾಲಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಅರಿತವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಈ ನಡುವೆ ಪಾಲೆತ್ತಡ್ಕ ನಿವಾಸಿ ಮರ್ದಾಳದಲ್ಲಿ ಅಂಗಡಿ ಹೊಂದಿರುವ ಬಾಲಕೃಷ್ಣ ರೈ ಎಂಬವರ ಮನೆಗೂ ನುಗ್ಗಿರುವ ಕಳ್ಳರು ನಗದನ್ನು ದೋಚಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಭಾವನಾ ಸಮಾವೇಶ :ವೀಕ್ಷಿಸಿ Subscribers ಮಾಡಿ

 

—ಜಾಹೀರಾತು—

Leave a Reply

error: Content is protected !!