ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಅಭಿಯಾನದಡಿ ಪ್ರತಿಜ್ಞೆ ಸ್ವೀಕರಿಸುವ ಕಾರ್ಯಕ್ರಮವು ನಡೆಯಿತು.
ಕಾಲೇಜಿನ ಹಿಂದಿ ಉಪನ್ಯಾಸಕ ಲೋಹಿತ್ ಕುಮಾರ್ ಪ್ರತಿಜ್ಞಾವಿಧಿಯನ್ನು ಬೋಧನೆ ಮಾಡಿದರು.
ಕಾಲೇಜಿನ ಹಿರಿಯ ಉಪನ್ಯಾಸಕ ವಸಂತಕುಮಾರ್.ಡಿ ಅವರು ಮಾತನಾಡುತ್ತಾ “ಮಾದಕ ವಸ್ತುಗಳು ವಿದ್ಯಾರ್ಥಿಗಳ ಜೀವನವನ್ನು ಹಾಳುಮಾಡುತ್ತದೆ. ವಿದ್ಯಾರ್ಥಿ ಹಂತದಲ್ಲಿಯೇ ತಪ್ಪು ದಾರಿಯನ್ನ ಹಿಡಿದಾಗ, ಉತ್ತಮ ಯುವ ಸಮಾಜವನ್ನು ಖಂಡಿತವಾಗಿಯೂ ನಿರ್ಮಿಸಲು ಸಾಧ್ಯವಿಲ್ಲ. ಯಾವ ಸಮಾಜದಲ್ಲಿ ಯುವ ಸಮೂಹ ತಪ್ಪು ದಾರಿಯಲ್ಲಿ ಇರುತ್ತದೆಯೋ ಆಗ ಇಡೀಯ ರಾಷ್ಟ್ರವೇ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತದೆ. ವಿದ್ಯಾರ್ಥಿಗಳೆಲ್ಲರೂ ಕೂಡ ಸ್ವಯಂ ಶಿಸ್ತಿನಿಂದ ರಾಷ್ಟ್ರ ಹಿತಕ್ಕಾಗಿ ತಪಸ್ಸಿನ ರೀತಿಯ ಜೀವನವನ್ನು ನಡೆಸಬೇಕು” ಎಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ನಶಾ ಮುಕ್ತ ಭಾರತ ಅಭಿಯಾನದ ಸಿಹಿನೆನಪಿಗಾಗಿ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ವಿದ್ಯಾರ್ಥಿಗಳು ಮಾದಕ ವ್ಯಸನಗಳಿಂದ ದೂರವಿದ್ದು ಉತ್ತಮ ಸಮಾಜ ಕಟ್ಟುವ ಸಂಕಲ್ಪದೊಂದಿಗೆ ಪ್ರತಿಜ್ಞೆಯನ್ನ ಸ್ವೀಕರಿಸಿದರು.