ನೆಲ್ಯಾಡಿ: ಪಡುಬೆಟ್ಟು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

ಶೇರ್ ಮಾಡಿ

ನೆಲ್ಯಾಡಿ: ಜೀವನದ ಆಳವಾದ ಅರ್ಥ, ಉದ್ದೇಶ ಮತ್ತು ನಿರ್ಧಿಷ್ಟ ಗುರಿಯನ್ನು ಸಾದು ಸಂತರು, ಶಾಸ್ತ್ರಗಳು ಹಾಗೂ ಪ್ರಾಚೀನ ಗ್ರಂಥ ತಿಳಿಸಿಕೊಟ್ಟಿದ್ದಾರೆ. ಧರ್ಮ ಇಲ್ಲದ ಜಗತ್ತು ಇಲ್ಲ, ಸಾಹಿತ್ಯ, ಕಾವ್ಯಗಳು ನಮ್ಮ ಜೀವನಕ್ಕೆ ಅತಿ ಅಗತ್ಯವಾಗಿದೆ. ರಾಮಾಯಣ, ಮಹಾಭಾರತ ಮಹಾಗ್ರಂಥಗಳು ಜೀವನ ಜ್ಯೋತಿಯಾಗಿವೆ. ಲಕ್ಷ್ಮಿಯನ್ನು ಯಾರು ಅರ್ಥಗರ್ಭಿತವಾಗಿ ವಶಪಡಿಸಿಕೊಳ್ಳುತ್ತಾನೆಯೋ ಆತನಲ್ಲಿ ಸಂಪತ್ತು, ಶ್ರೇಯಸ್ಸು ಲಕ್ಷ್ಮಿರೂಪದಲ್ಲಿ ಜೀವನದಲ್ಲಿ ನೆಲೆ ನಿಲ್ಲುತ್ತಾಳೆ. ಸನಾತನ ಪರಂಪರೆಯನ್ನು ಅರ್ಥಮಾಡಿಕೊಳ್ಳಬೇಕು, ಕಾವ್ಯ, ಕವನ ಗ್ರಂಥಗಳನ್ನು ಹೆಚ್ಚು ಹೆಚ್ಚು ಓದಬೇಕು ಇದರಿಂದ ನಮ್ಮ ಧರ್ಮ, ಸಂಸ್ಕೃತಿ ಆಚಾರವನ್ನು ಆಚರಣೆಯಲ್ಲಿ ಉಪಯೋಗಿಸಲು ಸಾಧ್ಯ ಎಂದು ನೆಲ್ಯಾಡಿ ಮಂಗಳೂರು ವಿವಿ ಘಟಕ ಕಾಲೇಜಿನ ಉಪನ್ಯಾಸಕ ಡಾ.ನೂರಂದಪ್ಪ ಹೇಳಿದರು.

ನೆಲ್ಯಾಡಿ ಪಡುಬೆಟ್ಟು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.

ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಸುಚಿತ್ರ.ಜೆ ಬಂಟ್ರಿಯಾಲ್, ದೇವಸ್ಥಾನದ ಆಡಳಿತ ಮುಕ್ತೇಸರ ಕೆ.ಸುಬ್ರಹ್ಮಣ್ಯ ಶಬರಾಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕೆ.ಎಸ್, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಸಂಧ್ಯಾ ಸುರೇಶ್ ಶೆಟ್ಟಿ, ದೇವಸ್ಥಾನದ ಪ್ರಧಾನ ಅರ್ಚಕ ಆದಿತ್ಯ ಪಿ.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ :
ಸಮಿತಿಯ ವತಿಯಿಂದ ನೆಲ್ಯಾಡಿ ಮಂಗಳೂರು ವಿವಿ ಘಟಕ ಕಾಲೇಜಿನ ಉಪನ್ಯಾಸಕ ಡಾ.ನೂರಂದಪ್ಪ ಹಾಗೂ ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಸುಚಿತ್ರ. ಜೆ ಬಂಟ್ರಿಯಾಲ್ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಮುಖ್ಯ ಶಿಕ್ಷಕ ವೆಂಕಟರಮಣ ಆರ್, ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿ.ಕೆ, ದೇವಸ್ಥಾನದ ದ್ವಾರ ಸಮಿತಿಯ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಕಾಂತಪ್ಪ ಗೌಡ, ಶಿವಪ್ರಸಾದ್, ಪುರುಷರ ಹಾಗೂ ಮಹಿಳೆಯರ ಭಜನಾ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ವರಮಹಾಲಕ್ಷ್ಮಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರಮಹಾಲಕ್ಷ್ಮಿ ಸಮಿತಿ ಕಾರ್ಯದರ್ಶಿ ಸುನಿತಾ ಸ್ವಾಗತಿಸಿದರು. ಸವಿತಾ.ರೈ ನಿರೂಪಿಸಿದರು. ರೇವತಿ ವಂದಿಸಿದರು.

Leave a Reply

error: Content is protected !!