ಇಚ್ಲಂಪಾಡಿ-ನೇರ್ಲ ಸರ್ಕಾರಿ ಶಾಲೆಯಲ್ಲಿ ಇ-ಲರ್ನಿಂಗ್ ತಂತ್ರಜ್ಞಾನ

ಶೇರ್ ಮಾಡಿ

ಇಚ್ಲಂಪಾಡಿ-ನೇರ್ಲ ಸರ್ಕಾರಿ ಶಾಲೆಯಲ್ಲಿ ಚೆರ್ರಿಲರ್ನ್ ಇ-ಲರ್ನಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಯಿತು. ಚೆರ್ರಿಲರ್ನ್ ನ ಶ್ರೀನಿಧಿ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿದ್ಯಾರ್ಥಿಗಳಿಗೆ ಪಠ್ಯದ ವಿಷಯವನ್ನು ಮನೆಯಲ್ಲಿ ತಮ್ಮ ಸ್ಮಾರ್ಟ್ ಫೋನ್ ನಿಂದ ಅನಿಮೇಟೆಡ್ ವೀಡಿಯೋಸ್ ಮತ್ತು ಚಟುವಟಿಕೆಗಳ ಮೂಲಕ ಸುಲಭವಾಗಿ ಕಲಿಯುವ ಆಪ್ ಆಗಿದ್ದು ಇದನ್ನು ತಿರುಮಲ ಎಂಟರ್ಪ್ರೈಸಸ್ ಮಂಗಳೂರು ಅವರ ಸಹಯೋಗದೊಂದಿಗೆ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಉಚಿತವಾಗಿ ಅಳವಡಿಸಲಾಯಿತು. ಆಪ್ ನಲ್ಲಿ 1ರಿಂದ 7ನೇ ತರಗತಿವರೆಗಿನ ಮಕ್ಕಳ ಪಠ್ಯಕ್ರಮಗಳು ಲಭ್ಯವಿದ್ದು ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ವಸಂತ ಬಿಜೇರು, ಉಪಾಧ್ಯಕ್ಷೆ ನಂದಾ, ಶಾಲಾ ಮುಖ್ಯಶಿಕ್ಷಕಿ ಜಯಶ್ರೀ.ಎಸ್, ಚೆರ್ರಿಲರ್ನ್ ಸಂಸ್ಥೆಯ ಉದ್ಯೋಗಿಗಳು, ಶಿಕ್ಷಕರು, ಪೋಷಕರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಡಾ.ಗಿರೀಶ್ ಹೆಚ್.ಎಂ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

error: Content is protected !!