ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ಅ.31ರಂದು ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನು ಹಮ್ಮಿಕೊಳ್ಳಲಾಯಿತು.
ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಆನಂದ.ಟಿ ಅವರು ವಹಿಸಿದರು. ಮುಖ್ಯ ಅತಿಥಿಯಾಗಿ ಸರಕಾರಿ ಪಿಯು ಕಾಲೇಜು ಕೊಕ್ಕಡದ ಪ್ರಾಂಶುಪಾಲ ವಿಶ್ವನಾಥ್ ಶೆಟ್ಟಿ ಮಾತನಾಡಿ ಶಿಕ್ಷಣದಲ್ಲಿ ಶಿಕ್ಷಕರೊಂದಿಗೆ ಹೆತ್ತವರ ಪಾತ್ರ ಅತಿ ಮುಖ್ಯವಾದದ್ದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ ಪಿ.ಟಿ, ಐ ಕ್ಯೂ ಎ ಸಿ ಸಂಯೋಜಕಿ ಲತಾ ಬಿ.ಟಿ ಹಾಗೂ ಶಿಕ್ಷಕ-ರಕ್ಷಕ ಸಂಘದ ಸದಸ್ಯರಾದ ಶಿವರಾಮ್.ರೈ, ಡಾ.ರವಿ ಕಕ್ಕೆಪದವು, ನೀಲಪ್ಪ, ಸಾಯಿಗೀತ ಕೂಜುಗೋಡು, ರೇವತಿ, ರೇವತಿ ಆಚಳ್ಳಿ, ಉಪಸಿತರಿದ್ದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕವನ್ನು ಮಾಡಲಾಯಿತು. ಅಧ್ಯಕ್ಷರಾಗಿ ಸಾಯಿಗೀತ ಕೂಜುಗೋಡು, ಸದಸ್ಯರಾಗಿ ಭವಾನಿ ಶಂಕರ್ ಪೈಲಾಜೆ, ಡಾ.ರವಿ ಕಕ್ಕೆಪದವು, ನಾಗೇಶ್ ಸವಣೂರು ಆಯ್ಕೆಯಾದರು.
ರಾಜ್ಯಶಾಸ್ತ್ರ ಉಪನ್ಯಾಸಕ ಭರತ್ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಉದಯಕುಮಾರ್ ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಮನೋಹರ್ ವಂದಿಸಿದರು.