ಕೊಕ್ಕಡ: ಶ್ರೀ ದುರ್ಗಾ ಪರಮೇಶ್ವರಿ ಯುವಕ ಮಂಡಲ ವೈಕುಂಠಪುರ ಶಿಶಿಲ ಇದರ ವತಿಯಿಂದ 27ನೇ ವರುಷದ ಮೊಸರುಕುಡಿಕೆ ಉತ್ಸವ ಸೆ.1ರಂದು ವಿಜೃಂಭಣೆಯಿಂದ ಜರುಗಿತು.
ಪುರಾತನ ಕಾಲದ ದಿನಬಳಕೆ ಸಾಮಗ್ರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸಾರ್ವಜನಿಕರಿಗಾಗಿ ವಿವಿಧ ರೀತಿ ಆಟೊ ಸ್ಪರ್ಧೆಗಳು. ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ಸ್ಥಳೀಯ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಹರೀಶ.ಕೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಶಿಲ ಗ್ರಾಮ ಪಂಚಾಯಿತಿನ ಅಧ್ಯಕ್ಷ ಸುಧಿನ್, ನಿಕಟಪೂರ್ವ ಅಧ್ಯಕ್ಷ ಸಂದೀಪ್.ಎ.ಎಸ್., ಅರಸಿನಮಕ್ಕಿ ಲತೇಶ ಯಕ್ಷಗಾನ ಕಲಾ ಕೇಂದ್ರದ ಯಕ್ಷಗುರು ಸುಂದರ ಗೌಡ, ಕೌಕ್ರಾಡಿ ಗ್ರಾಮ ಲೆಕ್ಕಾಧಿಕಾರಿ ಲಾವಣ್ಯ, ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕ ಕರುಣಾಕರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಸುಗುಣ ಕುಮಾರಿ.ಹೆಚ್ ಅವರಿಗೆ ಗೌರವಾರ್ಪಣೆ ಹಾಗೂ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಿತಿನ್ ಬೈರಕಟ್ಟ ಸ್ವಾಗತಿಸಿದರು. ಶರತ್ ಹಾಗೂ ರಾಮಚಂದ್ರ.ಕೆ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸುಂದರ.ಕೆ ಪ್ರಾಸ್ತಾವಿಕ ಮಾತನಾಡಿದರು. ಸತೀಶ.ಕೆ.ಕಾರ್ಯಕ್ರಮ ನಿರೂಪಿಸಿದರು.