ನೆಲ್ಯಾಡಿ: ಹೊಸಮಜಲು-ಕೌಕ್ರಾಡಿ ಅಶ್ವತ್ಥ ಗೆಳೆಯರ ಬಳಗ ಇದರ ಆಶ್ರಯದಲ್ಲಿ ಸ್ಥಳೀಯ ಹಿಂದೂ ಬಾಂಧವರಿಗಾಗಿ ಕಂಡಡ್ ಒಂಜಿ ದಿನ ಕೌಕ್ರಾಡಿ ಗ್ರಾಮದ ಬಾಣಜಾಲು ಗದ್ದೆಯಲ್ಲಿ ಸೆ.01 ರಂದು ನಡೆಯಿತು.
ಬೆಳಗ್ಗೆ ಹೊಸಮಜಲು ಅಶ್ವತ್ಥ ಕಟ್ಟೆ ಬಳಿಯಿಂದ ಜೋಡೆತ್ತಿನ ಹಾಗೂ ಟಾಸೆ ವಾದ್ಯಗಳ ಅಬ್ಬರದೊಂದಿಗೆ ಬಾಣಜಾಲು ಗದ್ದೆಯವರೆಗೆ ಮೆರವಣಿಗೆ ನಡೆಯಿತು. ನೆಲ್ಯಾಡಿಯ ಉದ್ಯಮಿ ಸುಬ್ರಹ್ಮಣ್ಯ ಆಚಾರ್ಯ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಯನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸರ್ವೋತ್ತಮ ಗೌಡ ಅವರು ಗದ್ದೆಗೆ ಹಾಲು ಎರೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಕಂಡಡ್ ಒಂಜಿ ದಿನ ಸಮಿತಿ ಅಧ್ಯಕ್ಷ ಸುಧೀರ್ ಕೃಷ್ಣ ಅವರ ಸಭಾಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ನೆಲ್ಯಾಡಿಯ ಉದ್ಯಮಿ ಸುಬ್ರಹ್ಮಣ್ಯ ಆಚಾರ್ಯ ಅವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಥಮ ವರ್ಷದ ಈ ಕಾರ್ಯಕ್ರಮವು ಆರಂಭ ಹಾಗೂ ಕೊನೆಯಾಗಬಾರದು ಇದು ಪ್ರತಿ ವರ್ಷ ಮುಂದುವರಿಯಬೇಕು ಎಂದರು ಹಾಗೂ ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ಭಾಜಪ ಶಿಕ್ಷಣ ಪ್ರಕೋಷ್ಠದ ಸದಸ್ಯ ಮುರಳಿ ಹೊಸಮಜಲು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸರ್ವೋತ್ತಮ ಗೌಡ, ಅಶ್ವತ್ಥ ಗೆಳೆಯರ ಬಳಗದ ಗೌರವಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಶಿಲ್ಪಾ ಹಾರ್ಡವೇರ್ ಅಂಡ್ ಕನ್ಸ್ಟ್ರಕ್ಷನ್ ನ ಶಿವಣ್ಣ. ಪಿ ಹೆಗ್ಡೆ, ಸಂಘದ ಉಪಾಧ್ಯಕ್ಷ ರಂಜಿತ್ ಮಂಚಿ, ಕಾರ್ಯದರ್ಶಿ ಪದ್ಮೇಶ್ ಪಾದೆ, ಕೋಶಾಧಿಕಾರಿ ಸೋನಿತ್, ಜೊತೆ ಕಾರ್ಯದರ್ಶಿ ಅಶೋಕ ಉಪಸ್ಥಿತರಿದ್ದರು.
ಕೌಕ್ರಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷ ಲೋಕೇಶ್ ಬಾಣಜಾಲು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಚಿನ್ಮಯಿ ಪ್ರಾರ್ಥಿಸಿದರು. ಅಶ್ವತ್ಥ ಗೆಳೆಯರ ಬಳಗದ ಅಧ್ಯಕ್ಷ ವಂದನ್ ಕುಮಾರ್ ವಂದಿಸಿದರು.
ಈ ಸಂದರ್ಭದಲ್ಲಿ ಕೌಕ್ರಾಡಿ ಅಣ್ಣುಗುಂಡಿ ನಿವಾಸಿ ನಾಟಿವೈದ್ಯೆ ವೇದಾವತಿ ಅವರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ನೆಲ್ಯಾಡಿ ಮುಳಿಯ ಸಿಲ್ವರಿಯಾ ಪ್ರಾಯೋಜಕತ್ವದ ಮುಳಿಯ ನಿಧಿಶೋದನೆ ( ಚಿನ್ನದ ನಾಣ್ಯ) ಸ್ಪರ್ಧೆಯನ್ನು ಸಾರ್ವಜನಿಕರಿಗೆ ಏರ್ಪಡಿಸಲಾಯಿತು.
ಕಾರ್ಯಕ್ರಮಕ್ಕೆ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಮಾರೋಪ ಸಮಾರಂಭ:
ಕಂಡಡ್ ಒಂಜಿ ದಿನ ಸಮಿತಿ ಅಧ್ಯಕ್ಷ ಸುಧೀರ್ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು ಮುಖ್ಯ ಅತಿಥಿಗಳಾಗಿ ನೆಲ್ಯಾಡಿ ಬಿರ್ವ ಹೋಟೆಲ್ ಮಾಲಕ ಸಂತೋಷ್, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ನೆಲ್ಯಾಡಿ ವಲಯದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಕೌಕ್ರಾಡಿ ಗ್ರಾಮ ಪಂಚಾಯತಿ ಸದಸ್ಯರಾದ ಸುಧಾಕರ ಗುತ್ತಿನ ಮನೆ, ಉದಯಕುಮಾರ್, ಸವಿತಾ, ಪುಷ್ಪಾ, ದೇವಕಿ, ನಿವೃತ್ತ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ್.ಎಸ್, ನಿವೃತ್ತ ಟೆಲಿಕಾಂ ಅಧಿಕಾರಿ ಚಂದ್ರಶೇಖರ ಬಾಣಜಾಲು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರೀಡಾಕೂಟದ ತೀರ್ಪುಗಾರರಾಗಿ ಸಹಕರಿಸಿದ ನಿವೃತ್ತ ದೈಹಿಕ ಶಿಕ್ಷಕ ಜನಾರ್ದನ.ಟಿ, ಮುಖ್ಯ ಶಿಕ್ಷಕಿ ಜಯಂತಿ.ಬಿ.ಎಂ., ಸುರೇಶ್ ಪಡಿಪಂಡ ಹಾಗೂ ಉದಯಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದ ಗಣೇಶ್ ನಡುವಾಲ್ ಅವರನ್ನು ಗೌರವಿಸಲಾಯಿತು. ಬಾಲಕೃಷ್ಣ ಬಾಣಜಾಲು ವಂದಿಸಿದರು.