ಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಆಂತರಿಕ ಗುಣಮಟ್ಟ ಭರವಸಾ ಕೋಶದೊಂದಿಗೆ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2024 -25 ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಸೆ.05ರಂದು ನೆರವೇರಿತು.
ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ದಿನೇಶ.ಪಿ.ಟಿ. ವಹಿಸಿದರು. ಉದ್ಘಾಟಕರಾಗಿ ನಿವೃತ್ತ ಪ್ರಾಂಶುಪಾಲ.ಎಂ.ಬಿ ಅಶೋಕ್ ಕುಮಾರ್ ಅವರು ರಾಷ್ಟ್ರೀಯ ಸೇವಾ ಯೋಜನೆಯ ಹಿನ್ನೆಲೆ, ಮಹತ್ವ ಹಾಗೂ ವ್ಯಕ್ತಿತ್ವ ವಿಕಸನವಾದಾಗಲೇ ಪ್ರತಿಭೆಗಳು ಅರಳುವುದೆಂದು ಸ್ವಯಂಸೇವಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕಿ ಲತಾ.ಬಿ.ಟಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಸುಮಿತ್ರ, ಘಟಕದ ನಾಯಕರುಗಳಾದ ನಿಶಾ ಗೌರಿ.ಎಂ, ಯಕ್ಷ.ಪಿ.ಎಸ್, ಜೀವನ್.ಎ, ಪ್ರದೀಪ್.ಸಿ.ವಿ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಆರತಿ.ಕೆ. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು, ಅತಿಥಿಯನ್ನು ಯಕ್ಷ.ಪಿ.ಎಸ್ ಪರಿಚಯಿಸಿದರು. ಜೀವಿತ್ ಕಾರ್ಯಕ್ರಮವನ್ನು ನಿರೂಪಿಸಿದರು. ನಿಶಾ ಗೌರಿ.ಎಂ ವಂದಿಸಿದರು.