ನೆಲ್ಯಾಡಿ: ಜೇಸಿ ಸಪ್ತಾಹ ‘ಡೈಮಂಡ್-2024’-ಆರೋಗ್ಯ ಮಾಹಿತಿ

ಶೇರ್ ಮಾಡಿ

ನೆಲ್ಯಾಡಿ: ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇದರ ಆಶ್ರಯದಲ್ಲಿ ನಡೆಯುತ್ತಿರುವ 41ನೇ ವರ್ಷದ ಜೇಸಿ ಸಪ್ತಾಹ’ ಡೈಮಂಡ್-2024′ ಅಂಗವಾಗಿ ಸೆ.10ರಂದು ಡ್ರಗ್ಸ್ ನಿಯಂತ್ರಣ ಮತ್ತು ಆರೋಗ್ಯ ಪೂರ್ಣ ಜೀವನ ಶೈಲಿ ಕುರಿತು ಮಾಹಿತಿ ಶಿಬಿರ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ನಡೆಯಿತು.

ಜೇಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ನೆಲ್ಯಾಡಿ ಜೇಸಿಐನ ಪೂರ್ವಾಧ್ಯಕ್ಷರೂ, ಜೇಸಿಐ ಇದರ ಮಾಜಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರೂ ಆದ ರವೀಂದ್ರ ಟಿ., ನೆಲ್ಯಾಡಿ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ.ಶಾಜಿ ಮ್ಯಾಥ್ಯು ಅವರು ಮಾಹಿತಿ ನೀಡಿದರು. ನೆಲ್ಯಾಡಿ ಜ್ಞಾನೋದಯ ಬೆಥನಿ ಹೈಸ್ಕೂಲ್‌ನ ಉಪಪ್ರಾಂಶುಪಾಲ ಜೋಸ್ ಎಮ್.ಜೆ.ಅವರು ಉದ್ಘಾಟಿಸಿ ಶುಭಹಾರೈಸಿದರು. ನೆಲ್ಯಾಡಿ ಬೆಥನಿ ಐಟಿಐ ಪ್ರಾಂಶುಪಾಲ ಸಜಿ ಕೆ.ತೋಮಸ್, ನೆಲ್ಯಾಡಿ ಜ್ಞಾನೋದಯ ಬೆಥನಿ ಹೈಸ್ಕೂಲ್‌ನ ಮುಖ್ಯಗುರು ಜಾರ್ಜ್ ಕೆ.ತೋಮಸ್ ಅವರು ಸಂದರ್ಭೋಚಿತವಾಗಿ ಮತನಾಡಿದರು.

ಯೋಜನಾ ನಿರ್ದೇಶಕ ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ಜೇಸಿಐ ಪೂರ್ವಾಧ್ಯಕ್ಷ ಜೋನ್ ಪಿ.ಎಸ್.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೇಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಸ್ವಾಗತಿಸಿದರು. ಜೆಜೆಸಿ ಅಧ್ಯಕ್ಷೆ ವೈಷ್ಣವಿ ಜೇಸಿವಾಣಿ ವಾಚಿಸಿದರು. ಜೇಸಿ ಪೂರ್ವಾಧ್ಯಕ್ಷರಾದ ಡಾ.ಸದಾನಂದ ಕುಂದರ್, ದಯಾನಂದ ಆದರ್ಶ, ಶಿವಪ್ರಸಾದ್ ಬೀದಿಮಜಲು, ಜೇಸಿ ಸದಸ್ಯರಾದ ಸತೀಶ್ ಕೆ.ಎಸ್.ದುರ್ಗಾಶ್ರೀ, ಅಬ್ದುಲ್‌ರಹಿಮಾನ್, ವಿನ್ಯಾಸ್ ಬಂಟ್ರಿಯಾಲ್ ಮತ್ತಿತರರು ಉಪಸ್ಥಿತರಿದ್ದರು.

ಗೌರವಾರ್ಪಣೆ:
ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಕರಾಟೆ ತರಬೇತುದಾರರೂ, ದೈಹಿಕ ಶಿಕ್ಷಣ ಶಿಕ್ಷಕಿಯೂ ಆದ ಶ್ರೀಮತಿ ಅಲ್ಫೋನ್ಸಾರವರನ್ನು ಈ ಸಂದರ್ಭದಲ್ಲಿ ನೆಲ್ಯಾಡಿ ಜೇಸಿಐ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನೆಲ್ಯಾಡಿ ಜೇಸಿಐ ಪೂರ್ವಾಧ್ಯಕ್ಷ ಪ್ರಕಾಶ್ ಕೆ.ವೈ. ಸನ್ಮಾನಿತರನ್ನು ಪರಿಚಯಿಸಿದರು. ಅತಿಥಿಗಳಿಗೆ ಶಾಲು,ಹೂ ನೀಡಿ ಗೌರವಿಸಲಾಯಿತು.

Leave a Reply

error: Content is protected !!