ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಆಂತರಿಕ ಗುಣಮಟ್ಟ ಭರವಸಾ ಕೋಶದೊಂದಿಗೆ, ಯುವ ರೆಡ್ ಕ್ರಾಸ್ ಘಟಕದ ಚಟುವಟಿಕೆಗಳ ಉದ್ಘಾಟನ ಸಮಾರಂಭ ಸೆ.11ರಂದು ನಡೆಯಿತು.
ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ದಿನೇಶ ಪಿ.ಟಿ. ವಹಿಸಿದರು, ಉದ್ಘಾಟಕರಾಗಿ ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅನುರಾಧಾ ಕುರುಂಜಿ ಅವರು ಯುವಜನತೆಯ ಮನಸ್ಸಿನಲ್ಲಿ ಸೇವಾ ಮನೋಭಾವನೆ ಇದ್ದರೆ ಮಾತ್ರ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಬಹುದು ಎಂದು ತಿಳಿಸಿದರು.
ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕಿ ಲತಾ.ಬಿ.ಟಿ, ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಾರದ ವನಿತಾ ಮತ್ತು ಸ್ವಾತಿ ಹಾಗೂ ಘಟಕದ ನಾಯಕರಾದ ಸಂಜನ.ಎನ್.ಎಸ್ ಮತ್ತು ವಿಳಾಸ್.ಎನ್.ಕೆ ಉಪಸ್ಥಿತರಿದ್ದರು.
ಯುವ ರೆಡ್ ಕ್ರಾಸ್ ಘಟಕದ ಯೋಜನಾಧಿಕಾರಿ ಶೃಜನ್ ಮುಂಡೋಡಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದ ಅತಿಥಿಯನ್ನು ಪ್ರೀಕ್ಷ ಪರಿಚಯಿಸಿದರು. ಸಂಜನ.ಎನ್.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಶ್ವಿತ.ಕೆ ವಂದಿಸಿದರು.