ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ಓಣಂ ಹಬ್ಬ ಮತ್ತು ಸಾಮೂಹಿಕ ಹುಟ್ಟುಹಬ್ಬ ಆಚರಣೆ ಆಚರಿಸಲಾಯಿತು.
ಅತಿಥಿಗಳಾಗಿ ಪ್ರಸನ್ನ ಹೊಸವಕ್ಲು ಪ್ರಗತಿಪರ ಕೃಷಿಕರು ಹಾಗೂ ಅವರ ಧರ್ಮಪತ್ನಿ ನಿವೇದಿತ ಅತಿಥಿ ಉಪನ್ಯಾಸಕಿ ಪದವಿಪೂರ್ವ ಕಾಲೇಜು ಅರಸಿನಮಕ್ಕಿ ಇವರು ಆಗಮಿಸಿ ಓಣಂ ಹಬ್ಬದ ಆಚರಣೆಯ ಮಹತ್ವ ಹಾಗೂ ಅದರ ಹಿನ್ನೆಲೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಶುಭ ಹಾರೈಸಿದರು.ಶಿಶು ಮಂದಿರದ ಪೋಷಕ ಪ್ರಿಯಾಂಕ ಹಾಗೂ ಶಾಲಾ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಪೂಕಳಂ ಹಾಕಲಾಯಿತು, ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಧ್ಯಾಹ್ನ ಬಾಳೆ ಎಲೆಯ (ಓಣಂಖಾದ್ಯ) ಔತಣವನ್ನು ಏರ್ಪಡಿಸಲಾಯಿತು. ಶಾಲಾ ಶಿಕ್ಷಕರು, ಶಿಕ್ಷಕೇತರ ಬಂಧುಗಳು, ಪೋಷಕರು ಹಾಗೂ ಊರವರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಹಾಗೂ ಸಾಮೂಹಿಕ ಹುಟ್ಟುಹಬ್ಬವನ್ನು ಆಯೋಜಿಸಿದರು.
ಭಾಗೀರಥಿ ಮಾತಾಜಿ ಸ್ವಾಗತಿಸಿದರು. ಶುಭರಾಣಿ ಮಾತಾಜಿ ವಂದಿಸಿದರು. ಮಮತಾ ಮಾತಾಜಿಯವರು ನಿರೂಪಿಸಿದರು.