ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅನುದಾನಿತ ಶಾಲೆಗೆ ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ

ಶೇರ್ ಮಾಡಿ

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೆರ್ಲ ಕ್ಲಸ್ಟರ್ ನ ಪ್ರತಿಭಾ ಕಾರಂಜಿಯು ಸೆ.14ರಂದು ನಡೆಯಿತು.

ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ವಾಮನ್ ತಾಮ್ಹಣ್ಕರ್ ಅವರು ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಸದಸ್ಯ ಗಣೇಶ್ ಭಿಡೆ ಉದ್ಘಾಟಿಸಿದರು. ಪೆರ್ಲ ಕ್ಲಸ್ಟರ್ ನ ಸಮಾಹ ಸಂಪನ್ಮೂಲ ವ್ಯಕ್ತಿ ವಿಲ್ಫ್ರೆಡ್ ಪಿಂಟೋ, ಶಿಕ್ಷಕ ಪ್ರತಿನಿಧಿ ದಾಮೋದರ.ಕೆ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಧರ್ಮರಾಜ್ ಗೌಡ ಅಡ್ಕಾಡಿ, ಸತೀಶ್ ಶೆಟ್ಟಿ, ಅರಸಿನಮಕ್ಕಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜಯರಾಜ್, ಎಸ್ ಡಿ ಎಮ್ ಸಿ ಅಧ್ಯಕ್ಷ ಉಪೇಂದ್ರ ಹಾಗೂ ಶಾಲಾಶಿಕ್ಷಕ ಸೀತಾರಾಮ ಗೌಡ ಶುಭ ಹಾರೈಸಿದರು.

ವಿಜೇತ ವಿದ್ಯಾರ್ಥಿಗಳನ್ನು ಪ್ರಶಸ್ತಿ ಪತ್ರ ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಿದರು. ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿಯ ವಿದ್ಯಾರ್ಥಿಗಳು ಒಟ್ಟು 20 ಬಹುಮಾನಗಳನ್ನು ಪಡೆದು ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಿರಿಯ ವಿಭಾಗದಲ್ಲಿ ಸತತ ಮೂರನೇ ಬಾರಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಶಿಕ್ಷಕರಾದ ಸೀತಾರಾಮ ಗೌಡ, ದಿವ್ಯಶ್ರೀ, ಹೇಮಾವತಿ, ಕುಮಾರಿ ಲೋಲಾಕ್ಷಿ, ಸಂಧ್ಯಾ, ಸ್ವಾತಿ ಹಾಗೂ ಸಂತೋಷ್ ಗೋಖಲೆ ಯವರು ತರಬೇತಿ, ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿಗಳ ಪೋಷಕರು ಶ್ರಮದಾನದ ಮೂಲಕ ಸಹಕರಿಸಿದರು.

Leave a Reply

error: Content is protected !!